ಇರಾಕ್‌ನ ಮಿಲಿಟರಿ ಕೌನ್ಸಲಿಂಗ್ ಕೇಂದ್ರದಲ್ಲಿ ಮಾತಿನ ಚಕಮಕಿ ಬಳಿಕ ಅಮೆರಿಕದ ಸೇನಾ ಸಾರ್ಜೆಂಟ್ ತನ್ನ ಐವರು ಸಹ ಸೈನಿಕರನ್ನು ಹತ್ಯೆ ಮಾಡಿದ ದಾರುಣ ಘಟನೆ ವರದಿಯಾಗಿದೆ.
ಯುದ್ಧದಲ್ಲಿ ಸೇವೆಸಲ್ಲಿಸುವ ಸೈನಿಕರ ಮಾನಸಿಕ ಒತ್ತಡ ಮತ್ತು ನೈತಿಕಸ್ಥೈರ್ಯ ಮುಂತಾದ ವಿಷಯಗಳ ಬಗ್ಗೆ ಈ ದಾಳಿಯು ಗಮನ ಸೆಳೆದಿದೆ. ಕೌನ್ಸಲಿಂಗ್ ಕೇಂದ್ರದಲ್ಲಿ ಚಕಮಕಿಯೊಂದು ನಡೆದ ಬಳಿಕ ಶಂಕಿತನನ್ನು ನಿಶ್ಶಸ್ತ್ರನನ್ನಾಗಿ ಮಾಡಲಾಗಿತ್ತು. ಆದರೆ ಇನ್ನೊಂದು ಅಸ್ತ್ರದೊಂದಿಗೆ ವಾಪಸು ಬಂದ ಆರೋಪಿ ಐವರ ಮೇಲೆ ಗುಂಡು ಹಾರಿಸಿಕೊಂದನೆಂದು ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫ್ರಾಗಿಂಗ್ಸ್ ಎಂದು ಕರೆಯಲಾದ ಸಹೋದ್ಯೋಗಿ ಸೈನಿಕರ ಮೇಲೆ ದಾಳಿಯು ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಸಾಮಾನ್ಯವಾಗಿತ್ತು. ಆದರೆ ಇರಾಕ್ ಮತ್ತು ಆಫ್ಘಾನಿಸ್ತಾನದಲ್ಲಿ ಇದು ಅಪರೂಪವೆಂದು ನಂಬಲಾಗಿತ್ತು.ಕಳೆದ ತಿಂಗಳು ಪಕ್ಕದ ಸೇನಾನೆಲೆಗೆ ಭೇಟಿ ನೀಡಿದ್ದ ಅಧ್ಯಕ್ಷ ಬರಾಕ್ ಒಬಾಮಾ, ಈ ವರದಿಯಿಂದ ತೀವ್ರ ಆಘಾತ ಮತ್ತು ದುಃಖವಾಗಿದ್ದಾಗಿ ತಿಳಿಸಿದ್ದಾರೆ.
ತಮ್ಮ ಭಯಾನಕ ದುರಂತದಲ್ಲಿ ಮೃತಪಟ್ಟವರ ಕುಟುಂಬ ಮತ್ತು ಸ್ನೇಹಿತರಿಗಾಗಿ ತಮ್ಮ ಹೃದಯ ಮಿಡಿಯುತ್ತಿರುವುದಾಗಿ ಅವರು ಹೇಳಿದ್ದಾರೆ.ಈ ದುರಂತಕ್ಕೆ ಕಾರಣವೆಂದು ತಮಗೆ ಸಂಪೂರ್ಣ ಅರ್ಥವಾಗಿದ್ದು, ರಾಷ್ಟ್ರಕ್ಕೆ ಸಮರ್ಥವಾಗಿ, ದಿಟ್ಟೆದೆಯಿಂದ ಸೇವೆ ಸಲ್ಲಿಸುವ ಯೋಧರ ರಕ್ಷಣೆಗೆ ಸಾಧ್ಯವಾದ ಎಲ್ಲ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. |