ಪಾಕಿಸ್ತಾನ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಮೇಲೆ ಪೂರ್ಣ ನಂಬಿಕೆ ಮತ್ತು ವಿಶ್ವಾಸ ವ್ಯಕ್ತಪಡಿಸಿರುವ ಒಬಾಮಾ ಆಡಳಿತವು,ಅಣ್ವಸ್ತ್ರಗಳ ಸುರಕ್ಷತೆ ಬಗ್ಗೆ ಮತ್ತು ರಾಷ್ಟ್ರದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟ ಮುಂದುವರಿಕೆ ಕುರಿತು ಜರ್ದಾರಿ ಅವರಿಂದ ಪೂರ್ಣ ಭರವಸೆ ಸಿಕ್ಕಿರುವುದಾಗಿ ಪ್ರತಿಪಾದಿಸಿದೆ.
ಪಾಕಿಸ್ತಾನದಲ್ಲಿ ಅಣ್ವಸ್ತ್ರಗಳ ಸಂಪೂರ್ಣ ನಿಯಂತ್ರಣ ಮತ್ತು ಅಧಿಪತ್ಯ ಹೊಂದಿರುವುದಾಗಿ ಅಧ್ಯಕ್ಷ ಜರ್ದಾರಿ ತಮಗೆ ಆಶ್ವಾಸನೆ ನೀಡಿದ್ದಾರೆಂದು ವಿದೇಶಾಂಗ ಇಲಾಖೆಯ ವಕ್ತಾರ ಐಯನ್ ಕೆಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು. ಅಮೆರಿಕ ಅದನ್ನು ಹೇಗೆ ಪರಿಶೀಲನೆ ಮಾಡುತ್ತದೆಂದು ಪ್ರಶ್ನಿಸಿದಾಗ ಅಧ್ಯಕ್ಷ ಜರ್ದಾರಿ ಅವರ ಮೇಲೆ ತಮಗೆ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸವಿದೆ ಎಂದು ಕೆಲ್ಲಿ ಹೇಳಿದರು.
ಕಳೆದ ವಾರ ಅಧ್ಯಕ್ಷ ಒಬಾಮಾ ಮತ್ತು ಜರ್ದಾರಿ ನಡುವೆ ಭೇಟಿಯು ಫಲಪ್ರದವಾಗಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಪರಿಗಣಿಸಿದ್ದಾರೆ. ಒಬಾಮಾ ಮತ್ತು ಜರ್ದಾರಿ ಅವರು ಕಳೆದ ವಾರ ತ್ರಿಪಕ್ಷೀಯ ಶೃಂಗಸಭೆ ನೇಪಥ್ಯದಲ್ಲಿ ಹಮೀದ್ ಕರ್ಜೈ ಜತೆ ಭೇಟಿ ಮಾಡಿದ್ದರು. |