ದಟ್ಟವಾದ ಜನಸಾಂದ್ರತೆಯಿರುವ ಸಂಘರ್ಷ ವಲಯದಲ್ಲಿ ಸೇನೆಯ ಸಶಸ್ತ್ರ ಪಡೆಗಳು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸುತ್ತಿಲ್ಲವೆಂಬ ಶ್ರೀಲಂಕಾ ಹೇಳಿಕೆಗೂ ಮತ್ತು ಉಪಗ್ರಹದ ಹೊಸ ಚಿತ್ರಗಳು ಹಾಗೂ ಪ್ರತ್ಯಕ್ಷದರ್ಶಿ ವರದಿಗಳೂ ತದ್ವಿರುದ್ಧವಾಗಿವೆಯೆಂದು ಪ್ರಮುಖ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆ ಬುಧವಾರ ತಿಳಿಸಿದೆ.
ಶ್ರೀಲಂಕಾ ಸೇನೆ ಮತ್ತು ಎಲ್ಟಿಟಿಇ ನಡುವೆ ಕದನ ನಡೆಯುತ್ತಿರುವ ಸಣ್ಣ ಕರಾವಳಿ ಪ್ರದೇಶದಲ್ಲಿ ಫಿರಂಗಿ ದಾಳಿಗಳ ಫಲವಾಗಿ 400ಕ್ಕಿಂತ ಹೆಚ್ಚು ನಾಗರಿಕರು ಸತ್ತಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆಂದು ಸ್ಥಳೀಯ ಮೂಲಗಳು ವರದಿ ಮಾಡಿರುವುದಾಗಿ ಮಾನವ ಹಕ್ಕು ಕಾವಲು ಸಮಿತಿ ತಿಳಿಸಿದೆ. ಇತ್ತೀಚಿನ ಉಪಗ್ರಹ ಚಿತ್ರಗಳು ಮತ್ತು ಪ್ರತ್ಯಕ್ಷದರ್ಶಿ ವರದಿಗಳಲ್ಲಿ ಸಂಘರ್ಷ ವಲಯದಲ್ಲಿ ನಾಗರಿಕರ ಮೇಲೆ ನಿರ್ದಯ ಶೆಲ್ ದಾಳಿ ಮಾಡುತ್ತಿರುವುದನ್ನು ತೋರಿಸಿದೆಯೆಂದು ಮಾನವ ಹಕ್ಕು ಕಾವಲು ಸಮಿತಿಯ ಏಷ್ಯಾ ನಿರ್ದೇಶಕ ಬ್ರಾಡ್ ಅಡಾಮ್ಸ್ ತಿಳಿಸಿದರು.
ಶ್ರೀಲಂಕಾ ಸೇನೆಗೆ ಅಥವಾ ತಮಿಳು ವ್ಯಾಘ್ರಗಳಿಗೆ ನಾಗರಿಕರನ್ನು ಫಿರಂಗಿ ಬಲಿಪಶು ಮಾಡಲು ಯಾವುದೇ ಹಿಂಜರಿಕೆ ಇರಲಿಲ್ಲವೆಂದು ಅದು ತಿಳಿಸಿದೆ.ಎಎಎಎಸ್ ಸಂಸ್ಥೆ ಬುಧವಾರ ಬಿಡುಗಡೆ ಮಾಡಿದ ಸಂಘರ್ಷ ವಲಯದಲ್ಲಿ ತೀಕ್ಷ್ಣವಾದ ಉಪಗ್ರಹ ಚಿತ್ರದ ಆರಂಭಿಕ ವಿಶ್ಲೇಷಣೆಯಲ್ಲಿ ಭಾರೀ ಶಸ್ತ್ರಗಳನ್ನು ಬಳಸಿದ್ದರಿಂದ ಉಂಟಾದ ರಂಧ್ರಗಳು ಮತ್ತು ನಿರಾಶ್ರಿತರಾದ ಜನರು ಬಳಸಿದ ಸಾವಿರಾರು ಡೇರೆಗಳನ್ನು ತೆರವು ಮಾಡಿದ ಚಿತ್ರಗಳನ್ನು ತೋರಿಸಿವೆ. |