ಇದು ಎಲ್ಲ ತರಗತಿಗಳ ರೀತಿ ಇರಲಿಲ್ಲ. 10 ವರ್ಷಗಳ ವಯಸ್ಸಿನ ಜಪಾನಿನ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಅಸಾಮಾನ್ಯ ಶಿಕ್ಷಕರೊಬ್ಬರಾದ ಮಾನವರೂಪಿ ರೋಬೊಟ್ ಪಾಠ ಮಾಡಿತು.
ನುಣುಪಾದ ಕಂದು ಕೂದಲು, ನಸುಗೆಂಪು ಲಿಪ್‌ಸ್ಟಿಕ್ ಮತ್ತು ಸ್ಕರ್ಟ್ ಸೂಟ್ ಧರಿಸಿದ್ದ 'ಸಾಯಾ'ನನ್ನು ಟೋಕಿಯೊ ವಿವಿ ವಿಜ್ಞಾನ ಪ್ರಾಧ್ಯಾಪಕ ಹಿರೋಶಿ ಕೊಬಾಯಾಶಿ ಮಾನವ ರೂಪಕ್ಕೆ ತೀರ ನಿಕಟವಾಗಿ ವಿನ್ಯಾಸಗೊಳಿಸಿದ್ದಾರೆ. ಅದು ತನ್ನ ಕುತ್ತಿಗೆಯನ್ನು ಅಲ್ಲಾಡಿಸಬಲ್ಲದು ಮತ್ತು ಮುಖ ಭಾವನೆಯನ್ನು ಬದಲಿಸಬಲ್ಲದು ಮತ್ತು ಒಟ್ಟು 30 ಚಲನೆ ಭಾಗಗಳಿಂದ ಕೂಡಿದೆ ಮತ್ತು ಮಾತನ್ನು ಸಹ ಆಡಬಲ್ಲದು ಎಂದು ಮೈಂಚಿ ಡೇಲಿ ನ್ಯೂಸ್ ವರದಿ ಮಾಡಿದೆ.
ಮಲಯ್ ಪದದಿಂದ ಹುಟ್ಟಿದ ಹೆಸರಿನ ಸಾಯಾನನ್ನು ದೂರನಿಯಂತ್ರಕದಿಂದ ನಿರ್ವಹಿಸಲಾಗುತ್ತದೆ. ವಿದ್ಯಾರ್ಥಿಗಳನ್ನು ಅಭಿನಂದಿಸಿದ ಸಾಯಾ ತಾನು ಯಾವ ರೀತಿಯ ರೋಬೊಟ್ ಎಂದು ನಿಮಗೆ ಗೊತ್ತೆ ಎಂದು ಪ್ರಶ್ನಿಸಿದಾಗ ವಿದ್ಯಾರ್ಥಿಗಳು ಚಕಿತರಾದರು.
ಇದು ಮಾನವನಂತೆ ಹೋಲುವುದಾಗಿ ಹೇಳಿದ ಕೊಬಾಯಾಶಿ ವಿಜ್ಞಾನದಲ್ಲಿ ಮಕ್ಕಳ ಆಸಕ್ತಿಯನ್ನು ರೋಬೊಟ್ ಉತ್ತೇಜಿಸಬಹುದೆಂದು ಅವರು ಆಶಾಭಾವನೆ ಹೊಂದಿದರು. ವಿಜ್ಞಾನ ಮತ್ತು ತಂತ್ರಜ್ಞಾನದ ಮೋಜನ್ನು ಮಕ್ಕಳಿಗೆ ಉಣಿಸಿ ರೋಬೊಟ್ ಪಾಠಗಳನ್ನು ಮುಂದುವರಿಸುತ್ತೆಂದು ಪ್ರೊಫೆಸರ್ ಆಶಯ ವ್ಯಕ್ತಪಡಿಸಿದರು. |