ಶ್ವೇತ ಭವನವು ತಮ್ಮ ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಬಿಚ್ಚಿಡುವ ಸ್ಥಳ ಎಂದು ಪ್ರಥಮ ಮಹಿಳೆ ಮೈಕೇಲ್ ಒಬಾಮಾ ತಿಳಿಸಿದ್ದಾರೆ. ಅದಕ್ಕಾಗಿ ಅವರು ಮತ್ತು ಅಧ್ಯಕ್ಷ ಬರಾಕ್ ಒಬಾಮಾ ಶ್ವೇತಭವನದ ಈಸ್ಟ್‌ರೂಮ್‌ಗೆ ನಟರು, ಕವಿಗಳು ಮತ್ತು ಲೇಖಕರನ್ನು ಆಹ್ವಾನಿಸಿದರು.
ನಟ ಜೇಮ್ಸ್ ಅರ್ಲ್ ಜೋನ್ಸ್, ಗಾಯಕ ಎಸ್ಪೆರಾನ್ಜಾ ಸ್ಪಾಲ್ಡಿಂಗ್ ಮತ್ತು ಸಂಯೋನಕ ಲಿನ್ ಮ್ಯಾನುಯಲ್ ಮಿರಾಂಡಾ ಸಂಯೋಜಿತ ಕವನ ವಾಚನ ಮತ್ತು ಆಡುಮಾತುಗಳ ರಸರಾತ್ರಿಯಲ್ಲಿ ಒಬಾಮಾ ಕುಟುಂಬ ಆತಿಥ್ಯ ವಹಿಸಿತು.
ಸಂಗೀತ, ಆಧುನಿಕ ಕವಿತೆ ಮತ್ತು ಶೇಕ್ಸ್‌ಪಿಯರ್ ನುಡಿಮುತ್ತುಗಳು ರಸರಾತ್ರಿಯ ವಿಶೇಷವಾಗಿತ್ತು.ಶ್ವೇತಭವನವು ಎಲ್ಲರಿಗೂ ಲಭ್ಯವಾಗುವಂತೆ ಒಬಾಮಾ ಆಡಳಿತ ಬಯಸುತ್ತದೆಂದು ಅವರು ಹೇಳಿದರು ಮತ್ತು ಕಲಾವಿದರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ಒಬಾಮಾ ಬಯಸಿದರು. ಇಂತಹ ಪ್ರದರ್ಶನಗಳು ಸೌಂದರ್ಯ ಮತ್ತು ನೋವನ್ನು ಅಭಿವ್ಯಕ್ತಿಸುತ್ತದೆಂದು ಒಬಾಮಾ ಹೇಳಿದರು. ಸಣ್ಣ ಮೇಜುಗಳ ಸುತ್ತ ಪ್ರೌಢಶಾಲೆ ವಿದ್ಯಾರ್ಥಿಗಳು ಒಬಾಮಾ ಜತೆ ಕಲೆತಿದ್ದರು. |