7.03 ಕ್ಯಾರೆಟ್ ತೂಕದ ಅಪರೂಪದ ನೀಲಿ ವಜ್ರವೊಂದು ಮಂಗಳವಾರ 10.5 ಮಿಲಿಯನ್ ಸ್ವಿಸ್ ಫ್ರಾಂಕ್ಸ್(9.49 ಮಿಲಿಯನ್ ಡಾಲರ್) ದಾಖಲೆಯ ಬೆಲೆಗೆ ಮಾರಾಟವಾಗಿದೆ.
ಹರಾಜಿನಲ್ಲಿ ಅತ್ಯಧಿಕ ಬೆಲೆಗೆ ಮಾರಾಟವಾದ ರತ್ನದ ಕಲ್ಲೆಂಬ ಖ್ಯಾತಿಗೆ ಅದು ಪಾತ್ರವಾಗಿದೆ. ಆಯಾತಕಾರದ ಆಕೃತಿಯ ನೀಲಿ ರತ್ನ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸಿದ ಅಪರೂಪದ ವಸ್ತುವಾಗಿದ್ದು, ಟೆಲಿಫೋನ್ ಮೂಲಕ ಬಿಡ್ ಮಾಡಿದ ಅಜ್ಞಾತ ಖರೀದಿದಾರನ ಮಡಿಲಿಗೆ ಸೇರಿದೆ. ಅಂತಿಮ ದರದಲ್ಲಿ ಖರೀದಿದಾರರು ಪಾವತಿ ಮಾಡುವ ದಳ್ಳಾಳಿ ಹಣ ಕೂಡ ಸೇರಿರುತ್ತದೆ.
ಪ್ರತಿ ಕ್ಯಾರೆಟ್‌ಗೆ ಯಾವುದೇ ರತ್ನದ ಕಲ್ಲಿಗೆ ದಾಖಲೆಯ ಬೆಲೆಯಾದ 1,349,752 ಡಾಲರ್‌ಗೆ ಮಾರಾಟವಾಗಿದೆ. ಹಿಂದಿನ ದಾಖಲೆಯ ದರವು 7.9 ಮಿಲಿಯನ್ ಡಾಲರ್ ಬೆಲೆಯ ನೀಲಿ ವಜ್ರವಾಗಿತ್ತು. 6.04 ಕ್ಯಾರೆಟ್ ತೂಕದ ಈ ವಜ್ರವು ಹಾಂಕಾಂಗ್‌ನಲ್ಲಿ ಅಕ್ಟೋಬರ್‌ನಲ್ಲಿ ಸೋತೆಬೈ ಆಭರಣ ಇಲಾಖೆಯಿಂದಲೇ ಮಾರಾಟವಾಗಿತ್ತು. |