ಜಿನೀವಾ ಮೂಲದ 47 ಸದಸ್ಯ ರಾಷ್ಟ್ರಗಳ ಮಾನವ ಹಕ್ಕು ಮಂಡಳಿಗೆ ಅಮೆರಿಕ ಪ್ರಥಮ ಬಾರಿಗೆ ಆಯ್ಕೆಯಾಗಿದೆ. ಮಂಡಳಿಯನ್ನು ನಿಷೇಧಿಸಿದ ಮುಂಚಿನ ಬುಷ್ ಆಡಳಿತದ ನೀತಿಯನ್ನು ಬದಲು ಮಾಡಿದ ಒಬಾಮಾ ಆಡಳಿತ ಮಾನವ ಹಕ್ಕು ಮಂಡಳಿಯಲ್ಲಿ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ.
2006ರಲ್ಲಿ ಸ್ಥಾಪನೆಯಾದ ಮಾನವ ಹಕ್ಕು ಆಯೋಗವನ್ನು ಬದಲಿಸಲು ಬುಷ್ ಆಡಳಿತ ತೀವ್ರ ಪ್ರಯತ್ನ ಮಾಡಿತ್ತೆಂದು ಹೇಳಲಾಗಿದೆ.ಅಮೆರಿಕವನ್ನು ಜನರಲ್ ಅಸೆಂಬ್ಲಿ ಆಯ್ಕೆ ಮಾಡಿದ ಬಳಿಕ, ಮಾನವ ಹಕ್ಕು ಮಂಡಳಿ ಇನ್ನೂ ನ್ಯೂನತೆಗಳಿಂದ ಕೂಡಿದೆಯೆಂದು ವಾಷಿಂಗ್ಟನ್ ಭಾವಿಸುವುದಾಗಿ ಅಮೆರಿಕದ ರಾಯಭಾರಿ ಸೂಸನ್ ರೈಸ್ ತಿಳಿಸಿದ್ದು, ಮಂಡಳಿಯ ಸುಧಾರಣೆ ಮತ್ತು ಬಲವರ್ಧನೆಗೆ ಆಂತರಿಕವಾಗಿ ಕೆಲಸ ಮಾಡಲು ಎದುರುನೋಡುತ್ತಿರುವುದಾಗಿ ಹೇಳಿದರು.
ಪ್ರಥಮ ಬಾರಿಗೆ ಆಯ್ಕೆಯಾದ ಇತರೆ ರಾಷ್ಟ್ರಗಳು ಬೆಲ್ಜಿಯಂ, ಹಂಗರಿ, ಕಿರ್ಗಿಸ್ಥಾನ್, ನಾರ್ವೆ ಜೂ.19ರಿಂದ ತಮ್ಮ ಅಧಿಕಾರಾವಧಿ 3 ವರ್ಷಗಳ ಕಾಲ ನಡೆಸಲಿವೆ.
ಚೀನಾ, ಕ್ಯೂಬಾ ಮತ್ತು ಸೌದಿ ಅರೇಬಿಯ ಪುನರಾಯ್ಕೆಯಾದ ರಾಷ್ಟ್ರಗಳಾಗಿದ್ದು, ಅಲ್ಲಿ ಮಾನವ ಹಕ್ಕು ದಾಖಲೆ ಕಾರ್ಯಕರ್ತರ ಗುಂಪುಗಳಿಂದ ಪ್ರಶ್ನಿತವಾಗಿವೆ. ಮಂಡಳಿಯ ವಿಧಿವಿಧಾನಗಳು ಮಾನವ ಹಕ್ಕು ಉಲ್ಲಂಘನೆ ರಾಷ್ಟ್ರಗಳು ಪರಸ್ಪರ ರಕ್ಷಣೆಗೆ ಅವಕಾಶ ನೀಡುತ್ತದೆಂದು ಟೀಕೆಗಳು ಕೇಳಿಬಂದಿವೆ. |