ಸುಮಾರು 6 ವರ್ಷಗಳಿಂದ ಗೃಹಬಂಧನದಲ್ಲಿದ್ದ ತನ್ನ ನಿವಾಸಕ್ಕೆ ಅಮೆರಿಕದ ಪೌರನೊಬ್ಬನ ಭೇಟಿಗೆ ಅವಕಾಶ ನೀಡಿದ್ದರಿಂದಾಗಿ ಮ್ಯಾನ್ಮಾರ್ ಪ್ರತಿಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಆರೋಪದ ವಿಚಾರಣೆ ಸಲುವಾಗಿ ಕುಖ್ಯಾತ ಇನ್‌ಸೇನ್ ಬಂಧೀಖಾನೆಗೆ ಗುರುವಾರ ಒಯ್ಯಲಾಗಿದೆ.
63 ವರ್ಷ ವಯಸ್ಸಿನ, 1991ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಸೂಕಿ ಇನ್‌ಸೇನ್ ಕಾರಾಗೃಹದಲ್ಲಿ ಸೂಕಿ ಸೇರಿದಂತೆ ಅವರ ಪರಿಚಾರಿಕೆ, ವೈದ್ಯರು ಮತ್ತು ಅವರ ನಿವಾಸಕ್ಕೆ ಇನ್ಯಾ ಕೆರೆಯಲ್ಲಿ ಈಜಿಕೊಂಡು ಆಗಮಿಸಿ ಮೂರು ರಾತ್ರಿಗಳನ್ನು ಕಳೆದ ಅಮೆರಿಕದ ಪೌರ ವಿಲಿಯಂ ಯೆಥೆವ್ ಕುರಿತಂತೆ ವಿಚಾರಣೆ ಎದುರಿಸಲಿದ್ದಾರೆ.
ಅನಧಿಕೃತ ಭೇಟಿಗೆ ಅವಕಾಶ ನೀಡಿದ ಸೂಕಿ ಇನ್‌ಸೇನ್ ಕಾರಾಗೃಹದಲ್ಲಿ ಜೈಲುವಾಸ ಶಿಕ್ಷೆ ಅನುಭವಿಸುವರೆಂದು ನಿರೀಕ್ಷಿಸಲಾಗಿದೆ. ಕಾನೂನಿನಲ್ಲಿ ಅವಕಾಶವಿರುವ 6 ವರ್ಷಗಳಿಗಿಂತ ಹೆಚ್ಚಿಗೆ ಆಂಗ್ ಸಾನ್ ಸೂಕಿಯವರನ್ನು ಬಂಧನದಲ್ಲಿರಿಸಿಲು ಬರ್ಮಾ ಆಡಳಿತದ ಕಪಟ ತಂತ್ರವೆಂದು ಬರ್ಮಾ ಕುರಿತ ಅಮೆರಿಕ ಆಂದೋಳನದ ಕಾರ್ಯಾನಿರ್ವಾಹಕ ನಿರ್ದೇಶಕ ಆಂಗ್ ಡಿನ್ ತಿಳಿಸಿದರು.
53 ವರ್ಷ ವಯಸ್ಸಿನ ಯಥಾವ್‌ರನ್ನು ಸೂಕಿ ನಿವಾಸದಿಂದ ಈಜಿಕೊಂಡು ಹೋಗುವಾಗ ಮೇ 6 ರ ಬೆಳಿಗ್ಗೆ ಬಂಧಿಸಲಾಗಿತ್ತು. ಸೂಕಿ ಅವರನ್ನು ಕಳೆದ 6 ವರ್ಷಗಳಿಂದ ಏಕಾಂಗಿಯಾಗಿ ಬಂಧಿಸಿಡಲಾಗಿದ್ದು ವಾರಕ್ಕೊಮ್ಮೆ ವೈದ್ಯರ ಭೇಟಿ ಮತ್ತು ಅಮೆರಿಕ ವಿಶೇಷ ಪ್ರತಿನಿಧಿಗಳು ಆಗಾಗ್ಗೆ ಭೇಟಿಗೆ ಅವಕಾಶ ನೀಡಲಾಗಿದೆ. |