ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮಾನವ ಪ್ರಮಾದದಿಂದ ಹಂದಿಜ್ವರ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾನವ ಪ್ರಮಾದದಿಂದ ಹಂದಿಜ್ವರ?
ಜಗತ್ತನ್ನು ಆವರಿಸಿರುವ ಹಂದಿ ಜ್ವರ ವೈರಸ್ ಮಾನವ ಪ್ರಮಾದದಿಂದ ಸೃಷ್ಟಿಯಾಗಿದೆಯೇ? ಆಸ್ಟ್ರೇಲಿಯದ ಸಂಶೋಧಕರೊಬ್ಬರು ಮಾನವ ಪ್ರಮಾದದಿಂದ ಹಂದಿ ಜ್ವರದ ವೈರಸ್ ಜಗತ್ತಿನಲ್ಲಿ ಹರಡುತ್ತಿದೆಯೆಂದು ಶಂಕಿಸಿದ್ದಾರೆ.

ತಮಿಫ್ಲು ಔಷಧಿ ಅಭಿವೃದ್ಧಿ ಸಂಶೋಧನೆಗೆ ಸಹಭಾಗಿಯಾದ 75 ವರ್ಷ ವಯಸ್ಸಿನ ಆಂಡ್ರಿಯನ್ ಗಿಬ್ಸ್, ಹೊಸ ವೈರಸ್ ಆಕಸ್ಮಿಕವಾಗಿ ಮೊಟ್ಟೆಗಳಲ್ಲಿ ಉತ್ಪತ್ತಿಯಾಗಿರಬಹುದೆಂದು ತಾವು ವರದಿಯೊಂದನ್ನು ಸಲ್ಲಿಸಲು ಇಚ್ಛಿಸಿರುವುದಾಗಿ ಹೇಳಿದ್ದಾರೆ. ಈ ಮೊಟ್ಟೆಗಳಲ್ಲಿ ವಿಜ್ಞಾನಿಗಳು ವೈರಸ್‌ಗಳನ್ನು ಬೆಳೆಸುತ್ತಿದ್ದರು ಮತ್ತು ಔಷಧಿ ಉತ್ಪಾದಕರು ಲಸಿಕೆಗಳ ತಯಾರಿಕೆಗೆ ಬಳಸುತ್ತಿದ್ದರು.

ವೈರಸ್‌ನ ವಂಶವಾಹಿ ನೀಲಿನಕ್ಷೆಯನ್ನು ವಿಶ್ಲೇಷಿಸುವ ಮ‌ೂಲಕ ವೈರಸ್ ಮ‌ೂಲವನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ಗಿಬ್ಸ್ ಮೇಲಿನ ತೀರ್ಮಾನಕ್ಕೆ ಬಂದಿದ್ದಾರೆ.ಇದಕ್ಕೆ ಸರಳವಾದ ವಿವರಣೆಯೆಂದರೆ ಇದೊಂದು ಪ್ರಯೋಗಶಾಲೆಯಿಂದ ಸೋರಿದ ಪ್ರಕರಣವೆಂದು ಗಿಬ್ಸ್ ಹೇಳಿದರು.

ವಿಶ್ವಆರೋಗ್ಯ ಸಂಸ್ಥೆಯು ಈ ಅಧ್ಯಯನವನ್ನು ಸ್ವೀಕರಿಸಿದ್ದು, ಅದರ ಪರಾಮರ್ಶೆ ನಡೆಸುತ್ತಿದೆಯೆಂದು ಏಜೆನ್ಸಿಯ ಸಹಾಯಕ ಪ್ರಧಾನ ನಿರ್ದೇಶಕ ಕೈಜಿ ಫುಕುಡಾ ಮೇ 11ರಂದು ನಡೆದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕೀಟಾಣುಗಳ ವಿಕಸನದ ಬಗ್ಗೆ ನಾಲ್ಕು ದಶಕಗಳಿಂದ ಅಧ್ಯಯನ ಮಾಡಿರುವ ಗಿಬ್ಸ್, ವಿಶ್ವವ್ಯಾಪಿ ವ್ಯಾಪಿಸುತ್ತಿರುವ ಹಂದಿಜ್ವರದ ವೈರಸ್ ವಂಶವಾಹಿ ವ್ಯವಸ್ಥೆ ಬಗ್ಗೆ ವಿಶ್ಲೇಷಣೆ ನಡೆಸಿದ ಮೊದಲ ವಿಜ್ಞಾನಿಯಾಗಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್‌‌ಟಿಟಿಇ ವಿರುದ್ಧ ಕಾರ್ಯಾಚರಣೆ ನಿಲ್ಲಿಸಲು ಶ್ರೀಲಂಕಾ ನಕಾರ
ನಾಗರಿಕರ ಮೇಲೆ ಶೆಲ್ ದಾಳಿಗೆ ಒಬಾಮಾ ಖಂಡನೆ
ಅಮೆರಿಕನ್ ಪೌರನ ರಹಸ್ಯ ಭೇಟಿ: ಸೂಕಿಗೆ ಶಿಕ್ಷೆ ಸಂಭವ
ಲಂಕಾ: 44 ಉಗ್ರರ ಬಲಿ
ಪಾಕ್‌: 11 ಉಗ್ರರ ಬಲಿ
ತಾಲಿಬಾನ್ ವಿರುದ್ಧ ಜಂಟಿ ಡ್ರೋನ್ ಕಾರ್ಯಾಚರಣೆ