ಇದು 21ನೇ ಶತಮಾನವಾಗಿದ್ದು, ಜೀಸಸ್ ಇಂಗ್ಲಿಷ್ ಚರ್ಚೊಂದರಲ್ಲಿ ತನ್ನ ತಲೆಗೂದಲು ಮತ್ತು ಗಡ್ಡವನ್ನು ನುಣುಪಾಗಿ, ಒಪ್ಪವಾಗಿ ಕತ್ತರಿಸಿಕೊಂಡು ಜೀನ್ಸ್ ಧರಿಸಿದ್ದರೆ ಆಶ್ಚರ್ಯಪಡಬೇಕಿಲ್ಲ. ಈಸ್ಟ್ ಸಸೆಕ್ಸ್‌ನಲ್ಲಿರುವ ಅವರ್ ಲೇಡಿ ಇಮ್ಯಾಕ್ಯುಲೇಟ್ ಮತ್ತು ಸೇಂಟ್ ಫಿಲಿರ್ ನೆರಿ ಕ್ಯಾಥೋಲಿಕ್ ಚರ್ಚ್‌ನಲ್ಲಿ ಭವ್ಯವಾದ 'ಜೀಸಸ್ ಇನ್ ಜೀನ್ಸ್' ಹೆಸರಿನ ಕಂಚಿನ ಪ್ರತಿಮೆ ಅನಾವರಣ ಮಾಡಲಾಗಿದ್ದು, ಏಸುಕ್ರಿಸ್ತನನ್ನು ಆಧುನಿಕ ವ್ಯಕ್ತಿಯಾಗಿ ಬಿಂಬಿಸಲಾಗಿದೆಯೆಂದು ಡೇಲಿ ಟೆಲಿಗ್ರಾಫ್ ವರದಿ ಮಾಡಿದೆ.
ಈ ವಿಗ್ರಹದಲ್ಲಿ ಏಸುಕ್ರಿಸ್ತ ಜೀನ್ಸ್ ಧರಿಸಿ ಅವನ ಅಂಗಿ ಗಾಳಿಯಲ್ಲಿ ಹಾರುತ್ತಿದ್ದರೆ ತಲೆಕೂದಲು ಮತ್ತು ಗಡ್ಡ ನುಣುಪಾಗಿ ಟ್ರಿಮ್ ಮಾಡಲಾಗಿದೆ. ಕ್ರೈಸ್ತ ಧರ್ಮದ ಅನುಭವದಲ್ಲಿ ಜನರ ಸಂಪನ್ನತೆಗೆ ನೂತನ ಮಾರ್ಗಗಳನ್ನು ಹುಡುಕಬೇಕು ಮತ್ತು ಅವನ್ನು ಮೆಚ್ಚಲು ಜನರು ಮುಕ್ತಮನಸ್ಸು ಹೊಂದಿರಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ನಾವು ಆಗಾಗ್ಗೆ ಜೀಸಸ್‌ನ ಆಧುನಿಕ ಚಿತ್ರಣವನ್ನು ನೋಡುತ್ತಿದ್ದು, ಏಸುಕ್ರಿಸ್ತ ದಯನೀಯ ಸ್ಥಿತಿಯಲ್ಲಿಲ್ಲದ ಸೃಜನಶೀಲ ರೂಪವನ್ನು ಬಯಸುತ್ತೇವೆ ಎಂದು ತಿಳಿಸಲಾಗಿದೆ.
ಈ ವಿನ್ಯಾಸವು ಏಸುಕ್ರಿಸ್ತನ ಚೈತನ್ಯ ಮತ್ತು ಚಟುವಟಿಕೆಯನ್ನು ನೂರ್ಮಡಿಗೊಳಿಸುತ್ತದೆಂದು 7 ಅಡಿಗಳ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿದ ಫಾದರ್ ಡೇವಿಡ್ ಬಕ್ಲಿ ಹೇಳಿದ್ದಾರೆಂದು ಪತ್ರಿಕೆ ವರದಿ ಮಾಡಿದೆ. |