ಶ್ರೀಲಂಕಾ ಸೇನೆ ಮತ್ತು ಎಲ್‌ಟಿಟಿಇ ನಡುವೆ ಕದನದಲ್ಲಿ ಸಾವಿರಾರು ನಾಗರಿಕರು ಸಿಕ್ಕಿಬಿದ್ದಿದ್ದು, ಶ್ರೀಲಂಕಾ ತಪ್ಪಿಸಿಕೊಳ್ಳುವ ಮಾರ್ಗವನ್ನು ತೆರೆದಿದ್ದರಿಂದ ಮುಲ್ಲೈತಿವು ಕರಾವಳಿ ಪ್ರದೇಶದ ನೂತನ ಸುರಕ್ಷಿತ ವಲಯದೊಳಗೆ ಎಲ್‌ಟಿಟಿಇ ಒತ್ತೆಯಾಳಾಗಿರಿಸಿದ 3000 ನಾಗರಿಕರು ಗುರುವಾರ ತಪ್ಪಿಸಿಕೊಂಡಿದ್ದಾರೆ.
ಪ್ರಸಕ್ತ ಕಾರ್ಯಾಚರಣೆಯ ಹಂತದಲ್ಲಿ ಸಿಕ್ಕಿಬಿದ್ದ ತಮಿಳು ನಾಗರಿಕರಿಗೆ ಸೇನೆ ನೆರವಾಗುತ್ತಿರುವುದರಿಂದ ಎಲ್‌ಟಿಟಿಇ ಹಿಡಿತದ ಪ್ರದೇಶದಿಂದ ನಾಗರಿಕರ ವಲಸೆ ಹೆಚ್ಚಾಗುವುದೆಂದು ನಿರೀಕ್ಷಿಸಲಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತ್ತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಸುರಕ್ಷಿತ ವಲಯದಲ್ಲಿ ಹದಗೆಟ್ಟ ಮಾನವೀಯ ಬಿಕ್ಕಟ್ಟಿನ ಬಗ್ಗೆ ಆತಂಕ ವ್ಯಕ್ತಪಡಿಸಿದ ಬಳಿಕ ಮತ್ತು ನಾಗರಿಕರ ಹಿತಾಸಕ್ತಿ ದೃಷ್ಟಿಯಿಂದ ಶ್ರೀಲಂಕಾ ಸರ್ಕಾರದ ಜತೆ ತಮಿಳು ವ್ಯಾಘ್ರಗಳು ಮಾತುಕತೆ ಪ್ರಸ್ತಾಪ ಮಂಡಿಸಿದ್ದರಿಂದ ಇತ್ತೀಚಿನ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಇದಕ್ಕೂ ಮುಂಚೆ ಬುಧವಾರ, ತಮ್ಮ ಉಳಿವಿಗಾಗಿ ಹತಾಶ ಕಾಳಗ ಮಾಡಿರುವ ತಮಿಳು ವ್ಯಾಘ್ರಗಳು, ಭೂ ಮತ್ತು ಜಲಪ್ರದೇಶದಲ್ಲಿ ಆತ್ಮಾಹುತಿ ದಾಳಿಗಳ ಅಲೆಯನ್ನು ಸೃಷ್ಟಿಸಿದ್ದರೂ ಅವರ ಭದ್ರಕೋಟೆ ಮುರಿದ ಶ್ರೀಲಂಕಾದ ಮುನ್ನಡೆಯನ್ನು ನಿಲ್ಲಿಸಲು ವಿಫಲವಾಗಿದ್ದು, ಭೀಕರ ಕದನದಿಂದ 44 ಬಂಡುಕೋರರು ಹತರಾಗಿದ್ದು, ಅನೇಕ ಸೈನಿಕರು ಸತ್ತಿದ್ದಾರೆ.
ಉಭಯ ಕಡೆಯಲ್ಲಿಯೂ ಕನದವಿರಾಮ ಘೋಷಿಸಬೇಕೆಂಬ ಅಂತಾರಾಷ್ಟ್ರೀಯ ಕರೆಯನ್ನು ಕಡೆಗಣಿಸಿದ್ದು, ನಾಗರಿಕರನ್ನು 'ಫಿರಂಗಿ ಬಲಿಪಶು'ಗಳಂತೆ ಬಳಸಲಾಗುತ್ತಿದೆಯೆಂದು ಮಾನವ ಹಕ್ಕು ಸಂಘಟನೆಗಳು ದೂರಿವೆ. |