ಲಂಕಾದ ಕದನಗ್ರಸ್ಥ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಅಮಾಯಕ ತಮಿಳು ನಾಗರಿಕರ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಲು ವಿಶ್ವಸಂಸ್ಥೆ ಸಚಿವ ಸಂಪುಟದ ಮುಖ್ಯಸ್ಥ ವಿಜಯ್ ನಂಬಿಯಾರ್ ಅವರು ಕೊಲಂಬೋಗೆ ತೆರಳಿದ್ದಾರೆ. ವಿಜಯ್ ಲಂಕಾದ ಅಧಿಕಾರಿಗಳನ್ನು ಭೇಟಿಯಾಗಿ ಯುದ್ಧ ಪೀಡಿತ ಪ್ರದೇಶದಿಂದ ತಮಿಳು ನಾಗರಿಕರನ್ನು ಪಾರುಗೊಳಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. |