ಹಂದಿ ಜ್ವರದ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಶಾಲೆಯ ಸಿಬ್ಬಂದಿಯೊಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಅಮೆರಿಕದ ಅಧಿಕಾರಿಗಳು ನಗರದ ಶಾಲೆಗಳನ್ನು ಮುಚ್ಚಿದ್ದಾರೆ.
ಸ್ಥಳೀಯ ಆಡಳಿತವು ಶುಕ್ರವಾರ ಮೂರು ಶಾಲೆಗಳನ್ನು ಮುಚ್ಚಿದ್ದು, ಶಾಲೆಯೊಂದರ ಸಹಾಯಕ ಪ್ರಾಂಶುಪಾಲರೊಬ್ಬರು ಹಂದಿಜ್ವರದ ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದರಿಂದ ಗುರುವಾರ ಕೂಡ ಮೂರು ಶಾಲೆಗಳನ್ನು ಮುಚ್ಚಲು ಸ್ಥಳೀಯ ಆಡಳಿತ ಆದೇಶಿಸಿದೆ. ಇಲ್ಲಿಯವರೆಗೆ ಹಂದಿಜ್ವರದ ಐದು ದೃಢಪಟ್ಟ ಪ್ರಕರಣಗಳು ವರದಿಯಾಗಿದ್ದು, ಶಾಲೆಗಳಲ್ಲಿ ಫ್ಲೂ ರೀತಿಯ ಲಕ್ಷಣಗಳಿರುವ ಅನೇಕಪ್ರಕರಣಗಳಿಂದ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.
ಸಿಡಿಸಿಯ ಫ್ಲೂ ವಿಭಾಗದ ಮುಖ್ಯಸ್ಥ ಡೇನಿಯಲ್ ಜರ್ನಿಗಾನ್, ಈ ಸಮಯದಲ್ಲಿ ಇಂತಹದ್ದನ್ನು ತಾವು ನಿರೀಕ್ಷಿಸಿರಲಿಲ್ಲವೆಂದು ಹೇಳಿದ್ದು, ವೈರಸ್ ರಾಷ್ಟ್ರವ್ಯಾಪಿ ಹರಡಿದ್ದರಿಂದ ಅದರ ಸೋಂಕಿಗೆ ಒಂದು ಲಕ್ಷ ಜನರು ಒಳಗಾಗಿದ್ದು, ರೋಗ ನಿಯಂತ್ರಕ ಮತ್ತು ನಿವಾರಣೆ ಕೇಂದ್ರದಿಂದ 4714 ಪ್ರಕರಣಗಳು ದೃಢಪಟ್ಟಿವೆಯೆಂದು ಫೆಡರಲ್ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ. |