ಭಾನುವಾರ ತಡವೇಳೆಯಲ್ಲಿ ಲಾಸ್ ಏಂಜಲ್ಸ್ ನಗರದಲ್ಲಿ ಸಾಧಾರಣ ಪ್ರಮಾಣದ ಭೂಕಂಪ ಅಪ್ಪಳಿಸಿದ್ದು, ಅನೇಕ ಜನರಿಗೆ ಭೂಕಂಪದ ಅನುಭವವಾಗಿದೆ. ಆದರೆ ಯಾವುದೇ ಗಾಯಗಳು ಮತ್ತು ಹಾನಿಯಾದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.
ಲಾಸ್ ಏಂಜಲ್ಸ್ ನೈರುತ್ಯಕ್ಕೆ 10 ಮೈಲು ದೂರದಲ್ಲಿ ರಾತ್ರಿ 8.39 ಕಾಲಮಾನದಲ್ಲಿ 5.0 ತೀವ್ರತೆಯ ಭೂಕಂಪವು ಇಂಗಲ್‌ವುಡ್ ಬಳಿ ಅಪ್ಪಳಿಸಿತೆಂದು ಅಮೆರಿಕ ಬೌಗೋಳಿಕ ಸಮೀಕ್ಷೆಯ ವರದಿ ತಿಳಿಸಿದೆ. ಕೆಲವೇ ನಿಮಿಷಗಳ ಬಳಿಕ ಕನಿಷ್ಠ ಎರಡು ಲಘುಕಂಪನಗಳು ಅಪ್ಪಳಿಸಿದ್ದು, ಲಾಸ್ ಏಂಜಲ್ಸ್ ಪ್ರದೇಶವನ್ನು ನಡುಗಿಸಿದೆ ಮತ್ತು ಸಾನ್ ಡೀಗೊ ದಕ್ಷಿಣದಲ್ಲೂ ಅದರ ಅನುಭವವಾಗಿದೆ ಎಂದು ಸಮೀಕ್ಷೆ ಹೇಳಿದೆ.
ಲಾಸ್ ಏಂಜಲ್ಸ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಯಾವುದೇ ಹಾನಿಯಾಗಿಲ್ಲ. ಅಗ್ನಿಶಾಮಕಕ್ಕೆ ಅನೇಕ ಕರೆಗಳು ಬಂದರೂ, ಯಾವುದೇ ಸಾವುನೋವಿನ ವರದಿಯಾಗಿಲ್ಲ ಎಂದು ವಕ್ತಾರ ಬ್ರಿಯಾನ್ ಹಮ್‌ಫ್ರಿ ತಿಳಿಸಿದ್ದಾರೆ. |