ಬರ್ಮಾ ವಿರೋಧ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಕುಖ್ಯಾತ ಇನ್‌ಸೇನ್ ಬಂಧೀಖಾನೆಯಲ್ಲಿ ತನಿಖೆ ನಡೆಸಲಾಗಿದೆ. ಅಮೆರಿಕದ ವ್ಯಕ್ತಿಯೊಬ್ಬ ಸರೋವರ ಈಜಿ ಸೂಕಿ ಮನೆಗೆ ರಹಸ್ಯ ಭೇಟಿ ನೀಡಿದ್ದರಿಂದ ಗೃಹಬಂಧನದ ನಿಯಮವನ್ನು ಸೂಕಿ ಮುರಿದ್ದಾರೆಂದು ಆರೋಪ ಹೊರಿಸಲಾಗಿದೆ.
ಆಕೆಯ ವಿಚಾರಣೆ ಸಂದರ್ಭದಲ್ಲಿ ಹತ್ತಾರು ಬೆಂಬಲಿಗರು ಜೈಲಿನ ಬಳಿ ಸೇರಿದ್ದರು.ಮುಂದಿನ ವರ್ಷದ ಚುನಾವಣೆ ಸಂದರ್ಭದಲ್ಲಿ ಸೂಕಿಯ ಬಂಧನದ ಖಾತರಿಗೆ ಅವರ ವಿರುದ್ಧ ಆರೋಪಗಳು ನೆಪಮಾತ್ರಕ್ಕೆ ಎಂದು ಅನೇಕ ಮಂದಿ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಕಳೆದ 19 ವರ್ಷಗಳಲ್ಲಿ ಸುಮಾರು 13 ವರ್ಷಗಳನ್ನು ಸೂಕಿ ಜೈಲಿನಲ್ಲಿ ಕೊಳೆತಿದ್ದಾರೆ.
ಸೂಕಿ ತಪ್ಪಿತಸ್ಥರೆಂದು ಕಂಡುಬಂದರೆ 3ರಿಂದ 5 ವರ್ಷಗಳು ಕಾಲ ಹೆಚ್ಚಿನ ಕಾರಾಗೃಹ ಶಿಕ್ಷೆಯನ್ನು ಅವರು ಎದುರಿಸಬೇಕಾಗಿದೆ. ವಿಚಾರಣೆ ಎಷ್ಟು ದಿನ ನಡೆಯುತ್ತದೆಂಬುದು ಸ್ಪಷ್ಟವಾಗಿಲ್ಲ. ಆದರೆ ಕೆಲವು ದಿನಗಳಿಂದ ಅನೇಕ ವಾರಗಳ ತನಕ ವಿಚಾರಣೆ ನಡೆಯಬಹುದೆಂದು ಅಂದಾಜು ಮಾಡಲಾಗಿದೆ. ಸರ್ಕಾರ ತನ್ನ ಆರೋಪ ರುಜುವಾತಿಗೆ 22 ಸಾಕ್ಷಿಗಳ ಹೇಳಿಕೆ ಪಡೆಯುವುದೆಂದು ನಿರೀಕ್ಷಿಸಲಾಗಿದೆ.
ಸೂಕಿಯ ಇಬ್ಬರು ಸಹಾಯಕರು ಕೂಡ ವಿಚಾರಣೆ ಎದುರಿಸಲಿದ್ದಾರೆ. ಸೂಕಿಯ ಎನ್‌ಎಲ್‌ಡಿ ಪಕ್ಷವು 1990ರಲ್ಲಿ ಭರ್ಜರಿ ಜಯ ಗಳಿಸಿದ್ದರೂ ಮಿಲಿಟರಿ ಅದನ್ನು ನಿರಾಕರಿಸಿ ಸೂಕಿಯನ್ನು ಗೃಹಬಂಧನದಲ್ಲಿ ಇರಿಸಿದೆ. |