ಸ್ಥಳೀಯ ಶಾಲೆಯ ಶಿಕ್ಷಕರೊಬ್ಬರು ಕಳೆದವಾರ ಹಂದಿಜ್ವರ ಪೀಡಿತರಾಗಿ ಸಾವಪ್ಪಿದ್ದರಿಂದ ನ್ಯೂಯಾರ್ಕ್ ನಗರದಲ್ಲಿ ಪ್ರಥಮ ಹಂದಿ ಜ್ವರ ಪ್ರಕರಣ ದಾಖಲಾಗಿದೆ.
ಕಳೆದ ವಾರ ಹಂದಿಜ್ವರ ಸೋಂಕಿನ ಹಿನ್ನೆಲೆಯಲ್ಲಿ 6 ಶಾಲೆಗಳನ್ನು ಮುಚ್ಚಲಾಗಿತ್ತು. ಆ ಶಾಲೆಗಳ ಪೈಕಿ ಒಂದು ಶಾಲೆಯಲ್ಲಿ ಸಹಾಯಕ ಪ್ರಾಂಶುಪಾಲ ಮಿಚಲ್ ವೈನರ್ ಕೆಲಸ ಮಾಡುತ್ತಿದ್ದರು. ಹಂದಿ ಜ್ವರದ ಆತಂಕದಿಂದ ಇನ್ನೂ ಐದು ಶಾಲೆಗಳನ್ನು ಸೋಮವಾರ ಮುಚ್ಚಲಾಗಿದೆ.
ಗುರುವಾರ ಶಾಲೆಗಳನ್ನು ಮುಚ್ಚುವುದಕ್ಕೆ ಒಂದು ವಾರ ಮುಂಚಿತವಾಗಿ ವೈನರ್ ಹಂದಿಜ್ವರದ ಸೋಂಕಿಗೆ ತುತ್ತಾಗಿದ್ದು, ಅವರ ಪರಿಸ್ಥಿತಿ ಹದಗೆಟ್ಟ ಬಳಿಕ ಆಸ್ಪತ್ರೆಗೆ ಸೇರಿಸಲಾಗಿತ್ತು. |