ಎಲ್‌ಟಿಟಿಇ ಮುಖಂಡ ವೇಳುಪಿಳ್ಳೈ ಪ್ರಭಾಕರನ್ ಶ್ರೀಲಂಕಾ ಸೇನೆಯ ಗುಂಡಿನ ದಾಳಿಗೆ ಬಲಿಯಾಗಿದ್ದಾನೆಂಬ ಸರ್ಕಾರದ ಹೇಳಿಕೆಯನ್ನು ಎಲ್‌ಟಿಟಿಇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನಿರಾಕರಿಸಿದ್ದು, ಅವನ ಸುರಕ್ಷತೆ ಮತ್ತು ಹಿತರಕ್ಷಣೆಯ ಬಗ್ಗೆ ಭರವಸೆಯಿಂದ ಹೇಳಿದೆ.ರಾಜಕೀಯ ವಿಭಾಗದ ನಾಯಕರಾದ ಬಿ. ನಾದೇಸನ್ ಮತ್ತು ಎಸ್. ಪುಲಿದೇವನ್ ಅವರನ್ನು ಮೋಸದಿಂದ ಹತ್ಯೆ ಮಾಡಲಾಗಿದೆ ಎಂದು ಎಲ್‌ಟಿಟಿಇ ಅಧಿಕೃತ ವೆಬ್‌ಸೈಟ್ ತಮಿಳ್‌ನೆಟ್‌ನಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳ ಮುಖ್ಯಸ್ಥ ಎಸ್. ಪದ್ಮನಾಥನ್ ಮಂಗಳವಾರ ಆರೋಪಿಸಿದ್ದಾನೆ.ಶ್ರೀಲಂಕಾ ಸರ್ಕಾರ ಮಿಲಿಟರಿ ಜಯ ಸಾಧಿಸಿರಬಹುದು. ಆದರೆ ಅದೊಂದು ಹುಸಿ ಜಯವಾಗಿದ್ದು, ಶ್ರೀಲಂಕಾ ತಮಿಳರ ಸಂಪೂರ್ಣ ವಿಶ್ವಾಸ ಮತ್ತು ನಂಬಿಕೆ ಕಳೆದುಕೊಂಡಿರುವುದಾಗಿ ಹೇಳಿದ್ದಾನೆ. ಇದೊಂದು ಮಾನವೀಯ ಪೀಳಿಗೆಯ ವಿರುದ್ಧ ಅಪರಾಧವಾಗಿದ್ದು, ಅದನ್ನು ತನಿಖೆ ಮಾಡಬೇಕಾಗಿದೆ ಎಂದು ಅವರು ನುಡಿದರು. ಶ್ರೀಲಂಕಾ ಸರ್ಕಾರವನ್ನು ದೂಷಿಸಿದ ಎಲ್‌ಟಿಟಿಇ ಸಂಘಟನೆಯ ರಾಜಕೀಯ ವ್ಯವಸ್ಥೆಯನ್ನು ಧ್ವಂಸ ಮಾಡಿತೆಂದು ಟೀಕಿಸಿದೆ.ಲಂಕಾದ ಸರ್ಕಾರಿ ಕಮಾಂಡೊಗಳು ಸೋಮವಾರ ಗೆರಿಲ್ಲಾಗಳ ಹಿಡಿತದಲ್ಲಿದ್ದ ಅರಣ್ಯದ ಸಣ್ಣ ಪ್ರದೇಶಕ್ಕೆ ಮುತ್ತಿಗೆ ಹಾಕಿ ತಮಿಳು ಟೈಗರ್ ಸಂಸ್ಥಾಪಕ ಮತ್ತು ನಾಯಕ ವೇಲುಪಿಳ್ಳೈ ಪ್ರಭಾಕರನ್ ಮತ್ತು ಅವನ ಇಬ್ಬರು ಸಂಗಡಿರ ಹತ್ಯೆ ಮಾಡಿದ್ದಾಗಿ ಘೋಷಿಸಿದೆ. |