ಆಫ್ಘನ್ ಅಧ್ಯಕ್ಷ ಹಮೀದ್ ಕರ್ಜೈ ಅವರ ಸೋದರ ಪ್ರಯಾಣಿಸುತ್ತಿದ್ದ ಮೋಟಾರ್ ವಾಹನದ ಮೇಲೆ ಬಂದೂಕುಧಾರಿಯೊಬ್ಬ ಸೋಮವಾರ ದಾಳಿನಡೆಸಿದ್ದರಿಂದ ಅವರ ಅಂಗರಕ್ಷಕನೊಬ್ಬ ಸತ್ತಿದ್ದಾನೆ.
ದಾಳಿಯಿಂದ ವಾಲಿ ಕರ್ಜೈಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಕಾಬುಲ್‌ಗೆ ಪೂರ್ವ ನಂಗಾರ್‌ಹಾರ್ ಪ್ರಾಂತ್ಯದಿಂದ ಪ್ರಯಾಣಿಸುತ್ತಿದ್ದ ಅಧ್ಯಕ್ಷರ ಸೋದರನ ಹತ್ಯೆ ಸಲುವಾಗಿ ಈ ದಾಳಿ ನಡೆಸಲಾಗಿದೆ. ಅಹ್ಮದ್ ವಾಲಿ ಕರ್ಜೈ ಕಂದಹಾರ್ ಪ್ರಾಂತ್ಯದ ಪ್ರಾಂತೀಯ ಮಂಡಳಿಯ ಅಧ್ಯಕ್ಷರಾಗಿದ್ದಾರೆ.
ನಾವು ಕಾಬೂಲ್‌ನತ್ತ ಪ್ರಯಾಣಿಸುತ್ತಿದ್ದಾಗ ಹಠಾತ್ತಾಗಿ ಬೆಟ್ಟದ ಮೇಲಿನಿಂದ ರಾಕೆಟ್ ಮತ್ತು ಪಿಕೆ ಮೆಷಿನ್ ಗನ್ ದಾಳಿ ನಡೆಸಲಾಯಿತು ಎಂದು ಅಹ್ಮದ್ ವಾಲಿ ಕರ್ಜೈ ತಿಳಿಸಿದರು.ತಮ್ಮ ಕಾರು ಮುಂಭಾಗದಲ್ಲಿತ್ತು ಮತ್ತು ಅಂಗರಕ್ಷಕರು ತಮ್ಮ ಹಿಂದೆ ಪ್ರತ್ಯೇಕ ಕಾರಿನಲ್ಲಿ ಬರುವಾಗ ಅವರಿಗೆ ಗುಂಡೇಟು ತಾಗಿದ್ದು, ಅಂಗರಕ್ಷಕರಲ್ಲೊಬ್ಬನು ಸತ್ತಿದ್ದಾನೆ. ತಾವು ವಾಹನಗಳನ್ನು ನಿಲ್ಲಿಸದೇ, ದಾಳಿಕೋರರ ಜತೆ ಗುಂಡಿನ ಚಕಮಕಿ ನಡೆಸಿದ್ದಾಗಿ ಕರ್ಜೈ ಹೇಳಿದ್ದಾರೆ. |