ತನ್ನ ಅಣ್ವಸ್ತ್ರಗಳ ಸುರಕ್ಷತೆ ಖಾತರಿಗೆ ಪಾಕಿಸ್ತಾನ ಮಿಲಿಟರಿ ಅನುಸರಿಸಿದ ಶಿಷ್ಟಾಚಾರಗಳ ಬಗ್ಗೆ ಪೆಂಟಗಾನ್ ತೃಪ್ತಿಹೊಂದಿರುವುದಾಗಿ ಪೆಂಟಗಾನ್ ತಿಳಿಸಿದೆ. ಆದರೆ ತಾಲಿಬಾನ್ ಪಾಕ್ ಅಣ್ವಸ್ತ್ರಗಳ ಕೈವಶಕ್ಕೆ ಯತ್ನಿಸಿದರೆ ಅಮೆರಿಕವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಪಾಕಿಸ್ತಾನದ ಎಲ್ಲ ಅಣ್ವಸ್ತ್ರಗಳನ್ನು ಎಲ್ಲಿ ಇರಿಸಲಾಗಿದೆಯೆಂದು ಅಮೆರಿಕಕ್ಕೆ ತಿಳಿದಿಲ್ಲವೆಂದು ಸಿಐಎ ನಿರ್ದೇಶಕ ಲಿಯೋನ್ ಪೆನೆಟ್ಟಾ ತಿಳಿಸಿದ ಮರುದಿನವೇ ಪೆಂಟಗಾನ್ ಹೇಳಿಕೆ ಹೊರಬಿದ್ದಿದೆ.
ರಕ್ಷಣಾ ಇಲಾಖೆಯ ವಕ್ತಾರ ಜೆಫ್ ಮಾರೆಲ್ ವರದಿಗಾರರ ಜತೆ ಮಾತನಾಡುತ್ತಾ, ಅಣ್ವಸ್ತ್ರಗಳ ಸುರಕ್ಷಿತತೆಗೆ ಪಾಕಿಸ್ತಾನ ಮಿಲಿಟರಿ ಕೈಗೊಂಡ ಶಿಷ್ಟಾಚಾರಗಳ ಬಗ್ಗೆ ತಮಗೆ ಸಮಾಧಾನವಿದೆ ಎಂದು ತಿಳಿಸಿದರು.
ಪಾಕಿಸ್ತಾನದ ಅಣ್ವಸ್ತ್ರಗಳು ತಾಲಿಬಾನಿಗಳ ಕೈವಶವಾದ ಸಂದರ್ಭದಲ್ಲಿ ಅವುಗಳ ಮರುಸ್ವಾಧೀನಕ್ಕೆ ವಿಶೇಷ ಕಾರ್ಯಾಚರಣೆ ಪಡೆಗಳು ತುರ್ತು ಯೋಜನೆಯನ್ನು ಹೊಂದಿರುವ ವರದಿಗಳನ್ನು ಕುರಿತು ಪ್ರಶ್ನಿಸಿದಾಗ, ಪಾಕಿಸ್ತಾನ ಕೈಗೊಂಡ ಸುರಕ್ಷತೆ ಕ್ರಮಗಳ ಬಗ್ಗೆ ತಮಗೆ ತೃಪ್ತಿಯಿರುವುದಾಗಿ ಅವರು ಹೇಳಿದರು. |