ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಹಿಂಸೆ ತ್ಯಜಿಸಬೇಕೆಂಬ ಮನವಿಗೆ ಕಿವಿಗೊಡದ ಪ್ರಭಾಕರನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿಂಸೆ ತ್ಯಜಿಸಬೇಕೆಂಬ ಮನವಿಗೆ ಕಿವಿಗೊಡದ ಪ್ರಭಾಕರನ್
ವೇಲುಪಿಳ್ಳೈ ಪ್ರಭಾಕರನ್ ಹಿಂಸೆಯನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಬೇಕೆಂಬ ಮನವಿಗಳಿಗೆ ಎಂದೂ ಕಿವಿಗೊಡದಿದ್ದರಿಂದ ಹಿಂಸಾತ್ಮಕ ಸಾವಿಗೆ ಗುರಿಯಾದನೆಂದು ಎಲ್‌ಟಿಟಿಇ ಮುಖ್ಯಸ್ಥನ ಮಾಜಿ ನಿಕಟವರ್ತಿ ಮಂಗಳವಾರ ತಿಳಿಸಿದ್ದಾರೆ.

ಕರ್ನಲ್ ಕರುಣಾ 2004ರಲ್ಲಿ ಪ್ರಭಾಕರನ್‌ ಸಂಗದಿಂದ ಬೇರ್ಪಡುವ ತನಕ ಪೂರ್ವ ಪ್ರದೇಶದ ಎಲ್‌ಟಿಟಿಇ ಕಮಾಂಡರ್ ಆಗಿದ್ದರು. ಉತ್ತರ ಲಂಕಾದಲ್ಲಿ ತಾವು ಗುಂಡುಹಾರಾಟ ನಿಷೇಧ ವಲಯದಲ್ಲಿ ಪ್ರಭಾಕರನ್ ದೇಹವನ್ನು ಗುರುತಿಸಿದ್ದಾಗಿ ಅವರು ಖಚಿತವಾಗಿ ಹೇಳಿದ್ದಾರೆ. ಅದು ಪ್ರಭಾಕರನ್ ದೇಹ ಅನ್ನುವುದಕ್ಕೆ ಅನುಮಾನವಿಲ್ಲ. ಅವನು ಸತ್ತಿದ್ದಾನೆನ್ನುವುದು ಸ್ವಲ್ಪಮಟ್ಟಿಗೆ ಖೇದಕರವೆನಿಸಿದರೂ ಅವನು ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಹಿಂಸಾಚಾರವೊಂದೇ ಏಕೈಕ ಪರಿಹಾರವೆಂದು ಪ್ರಭಾಕರನ್ ನಂಬಿದ್ದಾಗಿ ಪ್ರಸಕ್ತ ಫೆಡರಲ್ ಸಚಿವರಾಗಿರುವ ಕರುಣಾ ತಿಳಿಸಿದರು.

ಪ್ರಭಾಕರನ್ ಸರ್ಕಾರದ ಎಲ್ಲ ಪ್ರಸ್ತಾವನೆಗಳನ್ನು ನಿರಾಕರಿಸಿದನೆಂದು ಕರುಣಾ ತಿಳಿಸಿದ್ದು, ಹಿಂಸೆ ತ್ಯಜಿಸಿ ಸರ್ಕಾರದ ಮುಖ್ಯವಾಹಿನಿಗೆ ಸೇರುವ ಎಲ್ಲ ಅವಕಾಶವನ್ನು ಅವನು ಕಳೆದುಕೊಂಡನೆಂದು ಹೇಳಿದರು. ದಶಕಗಳ ಕಾಲದ ಜನಾಂಗೀಯ ಸಂಘರ್ಷಕ್ಕೆ ರಾಜಕೀಯ ಪರಿಹಾರಕ್ಕೆ ತಾವು ಸದಾ ಬಯಸಿದ್ದಾಗಿ ಕರುಣಾ ಹೇಳಿದರು. ಆದರೆ ಆ ಅಭಿಪ್ರಾಯಕ್ಕೆ ಎಲ್‌ಟಿಟಿಇ ನಾಯಕ ಪ್ರಭಾಕರನ್ ಮನ್ನಣೆ ನೀಡಲಿಲ್ಲವೆಂದು ಅವರು ಹೇಳಿದರು.

ಇದರಿಂದಾಗಿ ಅನೇಕ ಯುವಜನರು ಹತರಾದರು. ಎಲ್‌ಟಿಟಿಇಗೆ ಅನೇಕರನ್ನು ಬಲಪ್ರಯೋಗದಿಂದ ಸೇರಿಸಲಾಯಿತು. ಮಹಿಳೆಯರನ್ನು ಕೂಡ ಪ್ರಭಾಕರನ್ ಬಲವಂತವಾಗಿ ಸಂಘಟನೆಗೆ ಸೇರಿಸಿಕೊಂಡನೆಂದು ಕರುಣಾ ಹೇಳಿದ್ದಾರೆ. ತಮಿಳು ಮಕ್ಕಳ್ ವಿದುತಲೈ ಪುಲಿಗಲ್(ಟಿಎಂವಿಪಿ) ರಚಿಸಿದ ಕರುಣಾ, ಉಪನಾಯಕ ಪಿಳ್ಳಯನ್ ಜತೆ ಭಿನ್ನಾಭಿಪ್ರಾಯದಿಂದ ಪಕ್ಷವನ್ನು ತ್ಯಜಿಸಿ ಶ್ರೀಲಂಕಾ ಫ್ರೀಡಂ ಪಾರ್ಟಿಯ ಉಪಾಧ್ಯಕ್ಷರಾಗಿ ಸೇರಿದರು. ಕರುಣಾ ಅವರನ್ನು ಇತ್ತೀಚೆಗೆ ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಾಮರಸ್ಯ ಸಚಿವರಾಗಿ ಮಹೀಂದ್ರ ರಾಜಪಕ್ಷ ಸಂಪುಟದಲ್ಲಿ ನೇಮಕಮಾಡಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಮಿಳರಿಗೆ ಸಮಾನಹಕ್ಕು ತಮ್ಮ ಗುರಿ: ರಾಜಪಕ್ಷೆ
ಪಾಕ್ ಅಣ್ವಸ್ತ್ರ ಸುರಕ್ಷತೆ ಪೆಂಟಗನ್‌ಗೆ ತೃಪ್ತಿ
ಬಾನ್ ಕಿ ಮ‌ೂನ್ ಶ್ರೀಲಂಕಾಗೆ ಭೇಟಿ
ಇಂಡೋನೇಶಿಯ ವಿಮಾನ ಅಪಘಾತ: 68 ಬಲಿ
ತಮಿಳು, ಸಿಂಹಳೀಯರ ಅಧಿಕಾರ ಹಂಚಿಕೆಗೆ ಅಮೆರಿಕ ಕರೆ
ಪ್ರಭಾಕರನ್ 'ಸಾವು': ಶಂಕೆಗೆ ಕಾರಣಗಳು ಹಲವು