ಪಾಕಿಸ್ತಾನದ ಸೈನಿಕರು ತಾಲಿಬಾನ್ ಹೋರಾಟಗಾರರನ್ನು ರಾಜಧಾನಿಯಿಂದ 100 ಕಿಮೀ ದೂರದಲ್ಲಿರುವ ಬುನೇರ್ ಜಿಲ್ಲೆಯಿಂದ ಬಹುತೇಕ ಹೊರಗಟ್ಟಿದ್ದಾರೆ.
ಈ ಕಾಳಗದಲ್ಲಿ ಉಗ್ರಗಾಮಿಗಳು ಅತೀವ ಸಾವುನೋವಿಗೆ ಗುರಿಯಾಗಿದ್ದಾರೆಂದು ಮಿಲಿಟರಿ ತಿಳಿಸಿದೆ. ಸ್ವಾತ್ ಕಣಿವೆಯಲ್ಲಿ ಮತ್ತು ನೆರೆಯ ಬುನೇರ್ ಮತ್ತು ದಿರ್‌ನಲ್ಲಿ ಕಾರ್ಯಾಚರಣೆಯಿಂದ ಸುಮಾರು 1.4 ಮಿಲಿಯ ಜನರು ಸಂತ್ರಸ್ತರಾಗಿದ್ದಾರೆ. ಬುನೇರ್‌ನಲ್ಲಿ ತೀವ್ರ ಹೋರಾಟದಲ್ಲಿ ಭದ್ರತಾ ಪಡೆಗಳು ಗಣನೀಯ ಮುನ್ನಡೆ ಸಾಧಿಸಿದ್ದು, ಅನೇಕ ಪ್ರದೇಶಗಳು ಉಗ್ರಗಾಮಿಗಳಿಂದ ಮುಕ್ತವಾಗಿದ್ದು, ತೀವ್ರ ಸಾವುನೋವಿಗೆ ಗುರಿಯಾಗಿದ್ದಾರೆಂದು ಮಿಲಿಟರಿ ಮಂಗಳವಾರ ತಿಳಿಸಿದೆ.
ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಪ್ರಮುಖ ನೆಲೆಯನ್ನು ಪಾಕಿಸ್ತಾನ ಸೇನೆ ಕೈವಶ ಮಾಡಿಕೊಂಡಿದ್ದು, ಕನಿಷ್ಠ 80 ಉಗ್ರಗಾಮಿಗಳು ಭೀಕರ ಕಾಳಗದಲ್ಲಿ ಸತ್ತಿದ್ದಾರೆ. ತಾಲಿಬಾನ್ ಕಳೆದ ತಿಂಗಳು ಕೈವಶಮಾಡಿಕೊಂಡ ಬುನೇರ್ ಜಿಲ್ಲೆಯ ಸುಲ್ದಾನ್‌ವಾಸ್ ಗ್ರಾಮವನ್ನು ಭದ್ರತಾ ಪಡೆಗಳು ತೀವ್ರ ಹೋರಾಟದ ಬಳಿಕ ಆಕ್ರಮಿಸಿಕೊಂಡಿವೆ. |