ಪ್ರಜಾಪ್ರಭುತ್ವ ಪರ ನಾಯಕಿ ಆಂಗ್ ಸಾನ್ ಸೂಕಿಯ ಬಂಧನವನ್ನು ಮ್ಯಾನ್ಮಾರ್ ಸರ್ಕಾರ ಮುಂದುವರಿಸಿರುವುದು ದೌರ್ಜನ್ಯದ ಕ್ರಮ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಟೀಕಿಸಿದ್ದಾರೆ.
ಸೂಕಿ ರಾಜಕೀಯವಾಗಿ ಜನಪ್ರಿಯತೆ ಗಳಿಸಿರುವ ಹಿನ್ನೆಲೆಯಲ್ಲಿ ಜುಂಟಾ ಅವರನ್ನು ಬಂಧಿಸಿಟ್ಟಿದೆ ಎಂದು ಕ್ಲಿಂಟನ್ ಹೇಳಿದ್ದಾರೆ. ನ್ಮಾರ್‌ನಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆಯನ್ನು ಜುಂಟಾ ನಡೆಸಿಕೊಳ್ಳುತ್ತಿರುವ ರೀತಿಯಿಂದ ಮುಂದಿನ ವರ್ಷ ನಿಗದಿಯಾದ ಚುನಾವಣೆ ಅದು ಕಾನೂನುಬದ್ಧವೆನಿಸುವುದಿಲ್ಲ ಎಂದು ಕ್ಲಿಂಟನ್ ಹೇಳಿದ್ದಾರೆ.
ಸುಮಾರು 19 ವರ್ಷಗಳಲ್ಲಿ 13 ವರ್ಷಗಳನ್ನು ಸೂಕಿಯನ್ನು ಯಾವುದೇ ವಿಚಾರಣೆಯಿಲ್ಲದೇ ಮ್ಯಾನ್ಮಾರ್ ಸರ್ಕಾರ ಬಂಧಿಸಿಟ್ಟಿದ್ದು, ಗೃಹಬಂಧನದ ನಿಯಮಗಳನ್ನು ಉಲ್ಲಂಘಿಸಿದ ಆರೋಪಗಳನ್ನು ಈಗ ಸೂಕಿ ಎದುರಿಸುತ್ತಿದ್ದಾರೆ.
ಅಮೆರಿಕದ ವ್ಯಕ್ತಿಯೊಬ್ಬ ಅಧಿಕೃತ ಅನುಮತಿಯಿಲ್ಲದೇ ಸೂಕಿಯ ಮನೆಯಲ್ಲಿ ಉಳಿದಿದ್ದರೆಂದು ಸೂಕಿ ವಿರುದ್ಧ ಆರೋಪ ಹೊರಿಸಲಾಗಿದೆ. ಈ ಅಪರಾಧಕ್ಕಾಗಿ ಸೂಕಿ ಮತ್ತೆ ಐದು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ಅನುಭವಿಸಬೇಕಿದೆ. |