ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪ್ರಭಾಕರನ್ ಮರಣ ಪ್ರಮಾಣಪತ್ರಕ್ಕೆ ಭಾರತ ಸೂಚನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಭಾಕರನ್ ಮರಣ ಪ್ರಮಾಣಪತ್ರಕ್ಕೆ ಭಾರತ ಸೂಚನೆ
ಶ್ರೀಲಂಕಾ ಸೇನಾಪಡೆಯ ಗುಂಡಿಗೆ ಬಲಿಯಾದ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್‌ ಮರಣ ಪ್ರಮಾಣಪತ್ರ ಒದಗಿಸುವಂತೆ ಶ್ರೀಲಂಕಾ ಸರ್ಕಾರಕ್ಕೆ ಭಾರತ ಸೂಚಿಸಿದೆ. ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ ಅವರನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಭೇಟಿ ಮಾಡಿದಾಗ ಈ ಕೋರಿಕೆ ಸಲ್ಲಿಸಲಾಗಿದೆ.

ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹತ್ಯೆ ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಭಾಕರನ್ ಆರೋಪಿಯಾಗಿದ್ದು, ಭಾರತಕ್ಕೆ ಬೇಕಾದ ಅಪರಾಧಿಗಳ ಪಟ್ಟಿಯಲ್ಲಿ ಸ್ಥಾನಪಡೆದಿದ್ದ. ಪ್ರಭಾಕರನ್ ಸಾವಿನ ದೃಢೀಕರಣದಿಂದ ರಾಜೀವ್ ಗಾಂಧಿ ಹತ್ಯೆ ಪ್ರಕರಣ ಸೇರಿದಂತೆ ಪ್ರಭಾಕರನ್ ವಿರುದ್ಧ ಎಲ್ಲ ಪ್ರಕರಣಗಳನ್ನು ಮುಚ್ಚಲು ಸಹಾಯವಾಗುತ್ತದೆ.

ಪ್ರಭಾಕರನ್‌ಗೆ ಗುಂಡಿಕ್ಕಿ ಹತ್ಯೆಮಾಡಿದ ಬಳಿಕ ಅವನ ಮೃತದೇಹದ ವಿಡಿಯೋ ಚಿತ್ರವನ್ನು ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದ್ದು, ಅದನ್ನು ಹೊರತು ಪಡಿಸಿ ಪ್ರಭಾಕರನ್ ಸಾವನ್ನು ದೃಢೀಕರಿಸುವ ಬೇರಾವುದೇ ಸಾಕ್ಷ್ಯವಿಲ್ಲ. ಹತ್ಯೆಯಾದ ವ್ಯಕ್ತಿ ಪ್ರಭಾಕರನ್ ಎನ್ನುವುದನ್ನು ಸಾಬೀತು ಮಾಡುವ ದೃಢೀಕರಣ ತಮ್ಮಲ್ಲಿದೆಯೆಂದು ಶ್ರೀಲಂಕಾ ಹೇಳುತ್ತಿದೆ. ಏತನ್ಮಧ್ಯೆ, ತಮಿಳು ನಾಗರಿಕರ ಸ್ಥಿತಿಗತಿ ಕುರಿತು ನಾರಾಯಣನ್ ಮತ್ತು ಮೆನನ್ ರಾಜಪಕ್ಷೆ ಜತೆ ಮಾತುಕತೆ ನಡೆಸಿದರು.

ಇಬ್ಬರು ಅಧಿಕಾರಿಗಳು ರಾಜಪಕ್ಷೆ ಜತೆ ಅವರ ಟೆಂಪಲ್ ಟ್ರೀಸ್ ನಿವಾಸದಲ್ಲಿ ನಡೆದ ಭೋಜನಕೂಟದ ಸಭೆಯಲ್ಲಿ ಉತ್ತರ ಮತ್ತು ಪೂರ್ವದಲ್ಲಿ ಶ್ರೀಲಂಕಾಸೇನೆ ಮತ್ತು ಎಲ್‌ಟಿಟಿಇ ನಡುವೆ ಕದನದಲ್ಲಿ ಸಿಲುಕಿ ಅಪಾರ ಸಂಕಷ್ಟಗಳಿಗೆ ಗುರಿಯಾದ ಸಂತ್ರಸ್ತ ತಮಿಳರ ಪುನರ್ವಸತಿ ಮುಂತಾದ ತಕ್ಷಣದ ವಿಷಯಗಳನ್ನು ಚರ್ಚಿಸಲಾಯಿತು.

ಶ್ರೀಲಂಕಾ ತಮಿಳರ ಸ್ಥಿತಿಗತಿ ಬಗ್ಗೆ ಭಾರತ ವ್ಯಕ್ತಪಡಿಸಿದ ಕಳವಳದ ಬಗ್ಗೆ ಕೂಡ ನಿಯೋಗ ಮನದಟ್ಟು ಮಾಡಿದೆ. ತಮಿಳರು ಗೌರವ ಮತ್ತು ಸಮಾನತೆಯಿಂದ ಜೀವಿಸುವಂತಾಗಲು ಪರಿಣಾಮಕಾರಿ ಅಧಿಕಾರ ವಿಕೇಂದ್ರೀಕರಣ ಖಾತರಿಗೆ ರಾಜಕೀಯ ಹೆಜ್ಜೆಗಳನ್ನು ಕೈಗೊಳ್ಳಲು ನಿಯೋಗ ಆಗ್ರಹಿಸಿದೆ. ಶ್ರೀಲಂಕಾದ ಸಂತ್ರಸ್ತ ಜನರಿಗೆ 500 ಕೋಟಿ ಪುನರ್ವಸತಿ ಪ್ಯಾಕೇಜ್‌ನ್ನು ಭಾರತ ಸಿದ್ದಪಡಿಸಿರುವುದಾಗಿ ಹೇಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶ್ರೀಲಂಕಾ ತಮಿಳರಲ್ಲಿ ಮ‌ೂಡಿದ ವಿಷಣ್ಣತೆ
ಎಮೈರೇಟ್ಸ್ ಜತೆ ಪರಮಾಣು ಒಪ್ಪಂದ: ಒಬಾಮಾ ಸಮ್ಮತಿ
ಪ್ರಭಾಕರನ್ ಕುಟುಂಬ ಸೇನೆಯ ಗುಂಡಿಗೆ ಬಲಿ
ಸೂಕಿಯ ಬಂಧನ ದೌರ್ಜನ್ಯ: ಹಿಲರಿ ಕ್ಲಿಂಟನ್ ಟೀಕೆ
ಸ್ವಾತ್ ಕಣಿವೆ ಉಗ್ರರಿಂದ ಬಹುತೇಕ ಮುಕ್ತ
ಬಾಗ್ದಾದ್ ಕಾರ್ ಬಾಂಬ್ ದಾಳಿಗೆ 34 ಬಲಿ