ಇರಾಕಿನ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ಮಾಡಿ ಆಕೆಯ ಕುಟುಂಬವನ್ನು ಕೊಂದ ಮಾಜಿ ಸೈನಿಕನೊಬ್ಬನಿಗೆ ಮರಣದಂಡನೆ ಶಿಕ್ಷೆಯಿಂದ ವಿನಾಯಿತಿ ನೀಡಲಾಗಿದ್ದು, ನಿರ್ದಯ ಹತ್ಯೆಗೆ ಮರಣದಂಡನೆ ಶಿಕ್ಷೆ ನೀಡುವುದಕ್ಕೆ ತೀರ್ಪುಗಾರರು ಒಪ್ಪಲಿಲ್ಲ. ಟೆಕ್ಸಾಸ್ ಮಿಡ್‌ಲ್ಯಾಂಡ್‌ನ 24 ವರ್ಷ ವಯಸ್ಸಿನ ಸ್ಟೀವನ್ ಡೇಲ್ ಗ್ರೀನ್‌ಗೆ ಮರಣದಂಡನೆಗೆ ಬದಲಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಇರಾಕ್ ಮತ್ತು ಆಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರು ಭಾವನಾತ್ಮಕ ಮತ್ತು ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಿರುವ ಬಗ್ಗೆ ಈ ಪ್ರಕರಣ ಗಮನ ಸೆಳೆದಿದೆ. ಮಾರ್ಚ್ 2006ರಲ್ಲಿ ಇಸ್ಪೀಟ್ ಆಡಿದ ಬಳಿಕ ಇರಾಕಿ ವಿಸ್ಕಿ ಕುಡಿದ ಗ್ರೀನ್ ಮತ್ತು ಮೂರು ಸೈನಿಕರು ಬಾಗ್ದಾದಿಗೆ 20 ಮೈಲು ದೂರದ ಮಹಮೌದಿಯ ಬಳಿಯಿರುವ ಅಬೀರ್ ಕಾಸಿಂ ಮನೆಗೆ ತೆರಳಿದರು.
ಗ್ರೀನ್ ಬಾಲಕಿಯ ತಾಯಿ, ತಂದೆ ಮತ್ತು ಸೋದರಿಗೆ ಗುಂಡುಹಾರಿಸಿದ ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಗುಂಡುಹಾರಿಸಿ ಕೊಂದಿದ್ದ.ಗ್ರೀನ್ ಮೇಲೆ ಅತ್ಯಾಚಾರ ಮತ್ತು ಹತ್ಯೆ ಆರೋಪಕ್ಕೆ ತಪ್ಪಿತಸ್ಥರನ್ನಾಗಿ ಮಾಡಿದ ತೀರ್ಪುಗಾರರು ಸುಮಾರು 2 ದಿನಗಳಲ್ಲಿ 10 ಗಂಟೆಗಳ ಕಾಲ ವಿಚಾರವಿನಿಮಯ ನಡೆಸಿದ ಬಳಿಕ ಸೂಕ್ತ ಶಿಕ್ಷೆಗೆ ಸರ್ವಾನುಮತದ ಒಪ್ಪಿಗೆ ಪಡೆಯಲು ಸಾಧ್ಯವಾಗದಿದ್ದರಿಂದ ಜೀವಾವಧಿ ಶಿಕ್ಷೆಗೆ ತೀರ್ಪು ನೀಡಲಾಯಿತು. |