ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನಾದೇಸನ್, ಪುಲಿದೇವನ್ ಹತ್ಯೆ ಸುತ್ತ ಅನುಮಾನದ ಹುತ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾದೇಸನ್, ಪುಲಿದೇವನ್ ಹತ್ಯೆ ಸುತ್ತ ಅನುಮಾನದ ಹುತ್ತ
ಬಿಳಿ ದ್ವಜವನ್ನು ಹಿಡಿದು ಶರಣಾಗತಿಯ ಸಂಜ್ಞೆಯೊಂದಿಗೆ ಶ್ರೀಲಂಕಾ ಸೇನಾಧಿಕಾರಿಗಳನ್ನು ಸಮೀಪಿಸುತ್ತಿದ್ದ ಇಬ್ಬರು ಎಲ್ಟಿಟಿಇ ಉನ್ನತ ನಾಯಕರನ್ನು ಸರ್ಕಾರಿ ಪಡೆಗಳು ಕೊಂದುಹಾಕಿದವೇ ಅಥವಾ ಸ್ವತಃ ಎಲ್‌ಟಿಟಿಇ ಯೋಧರ ಗುಂಡಿಗೆ ಅವರಿಬ್ಬರು ಆಹುತಿಯಾದರೇ ಎನ್ನುವ ಸಂಗತಿ ನಿಗೂಢವಾಗಿ ಉಳಿದಿದೆ.

ಎಲ್‌ಟಿಟಿಇ ಪರ ತಮಿಳುನೆಟ್ ವೆಬ್‌ಸೈಟ್‌ನಲ್ಲಿ ಈ ಅನುಮಾನದ ಬೀಜವನ್ನು ಬಿತ್ತಲಾಗಿದ್ದು, ರಾಜಕೀಯ ದಳದ ಮುಖ್ಯಸ್ಥ ಬಿ.ನಾದೇಸನ್ ಮತ್ತು ಶಾಂತಿದಳದ ಮುಖ್ಯಸ್ಥ ಪುಲೀದೇವನ್ ಅವರು ಶರಣಾಗತಿ ಬಯಸಿ ತೆರಳಿದ್ದಾಗ ಗುಂಡಿಕ್ಕಿ ಕೊಂದಿದ್ದಾರೆಂದು ಹೇಳಿದೆ. ಅವರು ಅಂತಾರಾಷ್ಟ್ರೀಯ ಸಮುದಾಯದ ಜತೆ ಸಂಪರ್ಕದಲ್ಲಿದ್ದು ಶರಣಾಗತಿಗೆ ಸಿದ್ಧತೆಗಳನ್ನು ಮಾಡುತ್ತಿದ್ದಾಗಲೇ ನಿರ್ದಯವಾಗಿ ಹತ್ಯೆಯಾಗಿದ್ದಾರೆ.'ಯುದ್ಧವಲಯದಲ್ಲಿ ನಿಶ್ಶಸ್ತ್ರರಾಗಿ ಬಿಳಿಯ ಧ್ವಜವನ್ನು ಹಿಡಿದು ಶ್ರೀಲಂಕಾ ಪಡೆಯ 58ನೇ ದಳವನ್ನು ಸಂಪರ್ಕಿಸುವಂತೆ ನಮಗೆ ಆದೇಶಿಸಲಾಯಿತು.

ಬಿ.ನಾದೇಶನ್ ಮತ್ತು ಪುಲೀದೇವನ್ ಹಾಗೆ ತೆರಳಲು ನಿರ್ಧರಿಸಿದರು. ಅವರು ಶಸ್ತ್ರರಹಿತರಾಗಿದ್ದು, 58ನೇ ದಳದ ಅಧಿಕಾರಿಗಳು ಚರ್ಚೆಗೆ ಬರುವಂತೆ ಕರೆದರು. ಅವರು ಹಾಗೆ ಬಂದಿದ್ದಾಗ ಸೈನಿಕರು ಗುಂಡುಹಾರಿಸಿ ಹತ್ಯೆ ಮಾಡಿದರೆಂದು' ಅಂತಾರಾಷ್ಟ್ರೀಯ ವ್ಯವಹಾರಗಳ ಎಲ್‌ಟಿಟಿಇ ಮುಖ್ಯಸ್ಥ ಸೆಲ್ವರಸ ಪದ್ಮನಾಥನ್ ತಿಳಿಸಿದ್ದಾರೆ.ಇವರಿಬ್ಬರು ರೆಡ್ ಕ್ರಾಸ್ ಅಂತಾರಾಷ್ಟ್ರೀಯ ಸಮಿತಿಯನ್ನು(ಐಸಿಆರ್‌ಸಿ) ಮತ್ತು ದ್ವೀಪದ ಮಾಜಿ ಶಾಂತಿ ಪ್ರತಿನಿಧಿ ನಾರ್ವೆಯನ್ನು ಸಂಪರ್ಕಿಸಿ, ಶರಣಾಗುವ ಸಂದೇಶವನ್ನು ಶ್ರೀಲಂಕಾ ಸೇನೆ, ರಾಜತಾಂತ್ರಿಕರು ಮತ್ತು ನೆರವು ಅಧಿಕಾರಿಗಳಿಗೆ ಮುಟ್ಟಿಸುವಂತೆ ತಿಳಿಸಿದ್ದರು.

ತಟಸ್ಥ ಮಧ್ಯಸ್ಥಿಕೆಯ ಪಾತ್ರವಹಿಸುವಂತೆ ಎಲ್‌ಟಿಟಿಇ ಮತ್ತು ನಾರ್ವೆ ನಮ್ಮನ್ನು ಸಂಪರ್ಕಿಸಿದೆ ಎಂದು ಐಸಿಆರ್‌ಸಿ ವಕ್ತಾರೆ ಸರಸಿ ವಿಜೆರತ್ನೆ ಕೂಡ ಬಹಿರಂಗಪಡಿಸಿದ್ದು, ಶ್ರೀಲಂಕಾ ಸರ್ಕಾರಕ್ಕೆ ಸಂದೇಶ ಮುಟ್ಟಿಸಲಾಯಿತೆಂದು ಹೇಳಿದರು. ಆದರೆ ಬಳಿಕ ಸೋಮವಾರ ಅವರಿಬ್ಬರು ಸತ್ತಿದ್ದಾರೆಂಬ ಶ್ರೀಲಂಕಾ ಸರ್ಕಾರ ಪ್ರಕಟಿಸಿತು. ಉಪಗ್ರಹ ದೂರವಾಣಿ ಕರೆಗಳ ಬಳಿಕ ನಡೆದ ಘಟನೆಯ ಬಗ್ಗೆ ತಮಗೇನೂ ತಿಳಿಯದು ಎಂದು ಅಜ್ಞಾತ ರಾಜತಾಂತ್ರಿಕ ಮ‌ೂಲ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅತ್ಯಾಚಾರ, ಹತ್ಯೆ: ಅಮೆರಿಕ ಸೈನಿಕನಿಗೆ ಜೀವಾವಧಿ
ಬ್ರಿಟನ್ ನಟಿ ಲೂಸಿ ಗೋರ್ಡನ್ ಆತ್ಮಹತ್ಯೆ
ಇರಾಕ್: ಆತ್ಮಾಹುತಿ ದಾಳಿಗೆ 7 ಸೈನಿಕರು ಬಲಿ
ಜುಲೈನಲ್ಲಿ ಹಿಲರಿ ಕ್ಲಿಂಟನ್ ಭಾರತ ಭೇಟಿ
19 ನೇ ಬಾರಿಗೆ ಎವರೆಸ್ಟ್ ಏರಿ ದಾಖಲೆ ನಿರ್ಮಿಸಿದ ಶೆರ್ಪಾ
ಶ್ರೀಲಂಕಾ ತಮಿಳರ ಪ್ರದೇಶದಲ್ಲಿ ಚುನಾವಣೆ