ಮೆಕ್ಸಿಕೊ ನಗರಾದ್ಯಂತ ಹಂದಿ ಜ್ವರದ ಸೋಂಕು ಕಳೆದ ತಿಂಗಳು ಹರಡಿದ ಬಳಿಕ ವಿಧಿಸಿದ್ದ ಎಲ್ಲ ನಿರ್ಬಂಧಗಳನ್ನು ಈಗ ತೆರವು ಮಾಡಿದೆ. ರಾಜಧಾನಿಯಲ್ಲಿ ಯಾವುದೇ ಹೊಸ ಸೋಂಕುಗಳು ವರದಿಯಾಗಿಲ್ಲ ಎಂದು ಮೇಯರ್ ಮಾರ್ಸೆಲೊ ಎಬ್ರಾರ್ಡ್ ತಿಳಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡಗಳನ್ನು ಧರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಹಂದಿಜ್ವರದ ಸೋಂಕು ತುತ್ತತುದಿಗೆ ತಲುಪಿದ್ದಾಗ ನಗರದ ಚಟುವಟಿಕೆ ಅಕ್ಷರಶಃ ಸ್ಥಗಿತಗೊಂಡಿದ್ದು, ಶಾಲೆ, ಬಾರ್ ಮತ್ತು ಸಿನೇಮಾಗಳನ್ನು ಬಂದ್ ಮಾಡಲಾಗಿತ್ತು.ಮೆಕ್ಸಿಕೊದಲ್ಲಿ ಹಂದಿಜ್ವರದಿಂದ ಗುರುವಾರ ಇನ್ನೂ ಮೂವರ ಸಾವಿನೊಂದಿಗೆ ಇದುವರೆಗೆ ಒಟ್ಟು 78 ಜನರು ಸತ್ತಿದ್ದಾರೆಂದು ಅಧಿಕಾರಿಗಳು ಹೇಳಿದ್ದು, 4000 ಜನರು ಸೋಂಕುಪೀಡಿತರಾಗಿದ್ದಾರೆ.
ರಾಜಧಾನಿಯಲ್ಲಿ ಅಧಿಕಾರಿಗಳು ತಮ್ಮ ನಾಲ್ಕು ಹಂತಗಳ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಹಳದಿಯಿಂದ ಹಸಿರಿಗೆ ಇಳಿಮುಖಗೊಳಿಸಿದ್ದಾರೆ.ಸುಮಾರು 41 ರಾಷ್ಟ್ರಗಳಲ್ಲಿ ಹಂದಿಜ್ವರದ 11,034 ಪ್ರಕರಣಗಳು ಕಾಣಿಸಿಕೊಂಡಿದ್ದು, 85 ಜನರು ಅಸುನೀಗಿದ್ದಾರೆಂದು ವಿಶ್ವಆರೋಗ್ಯ ಸಂಘಟನೆ ತಿಳಿಸಿದೆ. |