ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪ್ರಭಾಕರನ್ ಜೀವಂತ: ಎಲ್ಟಿಟಿಇ ಬಹಿರಂಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಭಾಕರನ್ ಜೀವಂತ: ಎಲ್ಟಿಟಿಇ ಬಹಿರಂಗ
ಎಲ್‌ಟಿಟಿಇ ನಾಯಕ ವೇಲುಪಿಳ್ಲೈ ಪ್ರಭಾಕರನ್ ಶ್ರೀಲಂಕಾ ಸೇನೆಯ ಗುಂಡಿನ ದಾಳಿಗೆ ಬಲಿಯಾಗಿದ್ದಾನೆಂಬ ವರದಿಗಳನ್ನು ನಿರಾಕರಿಸಿರುವ ಎಲ್‌ಟಿಟಿಇ ಬೇಹುಗಾರಿಕೆ ದಳದ ಅಂತಾರಾಷ್ಟ್ರೀಯ ಕಾರ್ಯಾಲಯ ಮುಖ್ಯಸ್ಥ ಅರಿವೆಳಗನ್, ಆತನ ಸಾವಿನ ವರದಿಯು ಜನರ ದಾರಿ ತಪ್ಪಿಸಲು ಶ್ರೀಲಂಕಾ ಸರಕಾರ ಮತ್ತು ಸೇನೆಯ ಹುನ್ನಾರವಾಗಿತ್ತು ಎಂದು ಹೇಳಿದ್ದಾನೆ.

ನಮ್ಮ ಪ್ರೀತಿಪಾತ್ರ ನಾಯಕ ಇನ್ನೂ ಜೀವಂತವಿದ್ದಾನೆಂದು ಎಲ್ಟಿಟಿಇ ಪರವಾಗಿರುವ ತಮಿಳ್‌ನೆಟ್ ವೆಬ್‌ಸೈಟಿಗೆ ಬಹಿರಂಗಪಡಿಸಿದ ಅವರು, ಭವಿಷ್ಯದಲ್ಲಿ ಸೂಕ್ತ ಸಮಯದಲ್ಲಿ ತಮಿಳು ಜನರನ್ನು ಎಲ್‌ಟಿಟಿಇ ನಾಯಕತ್ವ ಸಂಪರ್ಕ ಸಾಧಿಸುತ್ತದೆಂದನುಡಿದಿದ್ದಾರೆ. ತಮಿಳು ಈಳಂ ಹೋರಾಟಕ್ಕೆ ಬೆಂಬಲದ ಧ್ವನಿ ನೀಡಿದ್ದ ತಮಿಳು ಸಮುದಾಯವನ್ನು ಗೊಂದಲದಲ್ಲಿ ಮುಳುಗಿಸಲು ಈ ವದಂತಿಗಳನ್ನು ಹುಟ್ಟುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

ಶ್ರೀಲಂಕಾದಲ್ಲಿ ಹಿರಿಯ ವರದಿಗಾರನ ಮ‌ೂಲಕ ತಮ್ಮ ಗುರುತನ್ನು ದೃಢೀಕರಿಸಿದ ಅರಿವಳಗನ್, ಭದ್ರತಾ ಕಾರಣಗಳಿಗಾಗಿ ತಾವು ಇರುವ ಸ್ಥಳವನ್ನು ಬಹಿರಂಗ ಮಾಡಿಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಭಾಕರನ್ ಜೀವಂತ ಸೆರೆ ಬಯಸಿದ್ದ ರಾಜಪಕ್ಷೆ
ಐಎಸ್‌ಐ, ತಾಲಿಬಾನ್ ಸಖ್ಯ ಕಡಿತಕ್ಕೆ ಅಮೆರಿಕ ಕರೆ
ಹಂದಿ ಜ್ವರ: ಮೆಕ್ಸಿಕೊದಲ್ಲಿ ನಿರ್ಬಂಧ ತೆರವು
3 ವರ್ಷಗಳಲ್ಲಿ 6200 ಶ್ರೀಲಂಕಾ ಸೈನಿಕರ ಸಾವು
ಸೇನಾ ಕಮಾಂಡೊಗಳ ಹತ್ಯೆ ತನಿಖೆಗೆ ಗಿಲಾನಿ ಆದೇಶ
ಸಂತ್ರಸ್ತ ತಮಿಳರ ಪುನರ್ವಸತಿಗೆ ಶ್ರೀಲಂಕಾ ಶಪಥ