ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಾಂಗ್ಲಾದಲ್ಲಿ ದಾವೂದ್ ಜಾಲ ವಿಸ್ತರಣೆಗೆ ನೆರವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಂಗ್ಲಾದಲ್ಲಿ ದಾವೂದ್ ಜಾಲ ವಿಸ್ತರಣೆಗೆ ನೆರವು
ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಜಾಲಕ್ಕೆ ಸೇರಿದ ಅಂತಾರಾಷ್ಟ್ರೀಯ ಮಾಫಿಯ ಭಾಗವಾದ ಕನಿಷ್ಠ 50 ಭಾರತೀಯ ಪಾತಕಿಗಳು ಆಗಾಗ್ಗೆ ಬಾಂಗ್ಲಾದೇಶಕ್ಕೆ ಭೇಟಿ ನೀಡಿ ಸ್ಥಳೀಯ ರಾಜಕೀಯ ಆಶ್ರಯ ಪಡೆಯುತ್ತಿದ್ದರೆಂದು ಮಾಧ್ಯಮದ ವರದಿಗಳು ಶನಿವಾರ ತಿಳಿಸಿವೆ.

50 ಭಾರತೀಯ ಪಾತಕಿಗಳ ನಾಲ್ಕು ಪುಟಗಳ ಪಟ್ಟಿಯನ್ನು ಅವರ ಸ್ಥಳೀಯ ವಿಳಾಸಗಳೊಂದಿಗೆ ನಾವು ಪತ್ತೆಹಚ್ಚಿದ್ದು ಅವರು ಆಗಾಗ್ಗೆ ಬಾಂಗ್ಲಾದೇಶಕ್ಕೆ ಭೇಟಿ ನೀಡಿ ಕೆಲವು ಪ್ರಭಾವಿ ರಾಜಕಾರಣಿಗಳ ಕೃಪಾಕಟಾಕ್ಷದಲ್ಲಿದ್ದರು ಎಂದು ಹಿರಿಯ ಪತ್ತೆದಾರಿ ಶಾಖೆಯ ಅಧಿಕಾರಿ ತಿಳಿಸಿದ್ದಾರೆ.ಢಾಕಾದಲ್ಲಿದ್ದ ಭಾರತೀಯ ಪೌರ ಜಾಹಿದ್ ಶೇಖ್ ಅಲಿಯಾಸ್ ಮುಜಾಹಿದ್‌ನ ಬಾಡಿಗೆ ನಿವಾಸದ ಮೇಲೆ ದಾಳಿ ಮಾಡಿದಾಗ ಪಾತಕಿಗಳ ಪಟ್ಟಿ ಸಿಕ್ಕಿತೆಂದು ಅಧಿಕಾರಿ ತಿಳಿಸಿದ್ದಾರೆ.

50 ಭಾರತೀಯ ಪಾತಕಿಗಳಲ್ಲಿ ಇಬ್ಬರು ಖುಲ್ನಾದಲ್ಲಿ ದೀರ್ಘಕಾಲದಿಂದ ತಂಗಿದ್ದರೆಂದು ಅವರು ಹೇಳಿದರು. ದಾವೂದ್ 20 ಬಾಂಗ್ಲಾದೇಶಿ ಮಹಿಳೆಯರನ್ನು ತನ್ನ ಜಾಲಕ್ಕೆ ನೇಮಕ ಮಾಡಿಕೊಳ್ಳಲು ಭಾರತೀಯ ಪಾತಕಿಗಳು ನೆರವಾದರೆಂದು ಹೇಳಲಾಗಿದೆ. ಭೂಗತಲೋಕದ ಗ್ಯಾಂಗಿಗೆ ಜನರ ಮನವೊಲಿಸಿ ಅವರನ್ನು ಸೇರಿಸಿಕೊಳ್ಳುವುದು ಮಹಿಳೆಯರ ಕೆಲಸವಾಗಿತ್ತೆಂದು ಅಧಿಕಾರಿ ತಿಳಿಸಿದ್ದಾರೆ.

ದಾವೂದ್‌ನ ಎರಡನೇ ಅಧಿಪತಿಯಾದ ಚೋಟಾ ಶಕೀಲ್ ತನ್ನ ಬಾಸ್ ಮಾದರಿಯಲ್ಲಿ ಪಾಕಿಸ್ತಾನ ಮತ್ತು ದುಬೈನಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಸ್ಥಳೀಯ ಜಾಲಕ್ಕೆ ಆರ್ಥಿಕ ನೆರವು ನೀಡಲು ಅಪಾರ ಪ್ರಮಾಣದ ಹಣ ಕಳಿಸುತ್ತಿದ್ದನೆಂದು ತಿಳಿದುಬಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡೇ ಕೇರ್ ಸೆಂಟರ್‌ನಲ್ಲಿ ಬೆಂಕಿಗೆ 29 ಮಕ್ಕಳು ಬಲಿ
78 ಜನರಿಗೆ ತೀವ್ರ ಹುಡುಕಾಟ
ವಿದ್ಯಾರ್ಥಿಗಳ ಮೇಲೆ ಮುಂದುವರಿದ ದಾಳಿ
ಭಾರತ-ಪಾಕ್ ಬಿಕ್ಕಟ್ಟಿನಿಂದ ಉಗ್ರರಿಗೆ ಲಾಭ: ಗಿಲಾನಿ
ಪಾರ್ಸೆಲ್ ಬಾಂಬ್ ಸ್ಪೋಟಕ್ಕೆ ಪಾಕ್ ಸಂಸದ ಗಾಯ
ಪಾಕಿಸ್ತಾನದ ಮಸೀದಿಯಲ್ಲಿ ಸ್ಫೋಟ: 40 ಬಲಿ