ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶ್ರೀಲಂಕಾ ಯುದ್ಧಾಪರಾಧಗಳ ತನಿಖೆಗೆ ಬಾನ್ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾ ಯುದ್ಧಾಪರಾಧಗಳ ತನಿಖೆಗೆ ಬಾನ್ ಒತ್ತಾಯ
ಶ್ರೀಲಂಕಾದಲ್ಲಿ ಯುದ್ಧಾಪರಾಧ ನಡೆದಿರುವ ಸಾಧ್ಯತೆ ಬಗ್ಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮ‌ೂನ್ ಸಂಶಯ ವ್ಯಕ್ತಪಡಿಸಿದ್ದು, ಸರ್ಕಾರದ ಮಿಲಿಟರಿ ಕಾರ್ಯಾಚರಣೆಯ ಪರಿಶೀಲನೆಗಅಂತಾರಾಷ್ಟ್ರೀಯ ತನಿಖೆ ನಡೆಸುವ ಅಗತ್ಯವನ್ನು ಪ್ರತಿಪಾದಿಸಿದರು.

ಭದ್ರತಾ ಮಂಡಳಿ ಸದಸ್ಯರ ಜತೆ ರಹಸ್ಯಸಭೆ ನಡೆಸಿದ ಬಾನ್ ಕಿ ಮ‌ೂನ್, ಅಂತಾರಾಷ್ಟ್ರೀಯ ಬೆಂಬಲದೊಂದಿಗೆ ಮತ್ತು ಶ್ರೀಲಂಕಾ ಸರ್ಕಾರದ ಪೂರ್ಣ ಸಹಕಾರದೊಂದಿಗೆ ವಿಶ್ವಾಸಾರ್ಹ ತನಿಖೆ ನಡೆಸುವುದಕ್ಕೆ ಕರೆನೀಡಿದರು. ಆದರೆ ತನಿಖೆ ಹೇಗೆ ನಡೆಯಬೇಕೆಂದು ನಿಖರವಾಗಿ ವಿವರಣೆ ನೀಡಲು ನಿರಾಕರಿಸಿದ ಅವರು, ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳ ಗಂಭೀರ ಉಲ್ಲಂಘನೆ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ತಿಳಿಸಿದರು.

ಯಾವುದೇ ತನಿಖೆಗೆ ವಿಶ್ವಸಂಸ್ಥೆಯ ಸದಸ್ಯರ ಬೆಂಬಲವಿರಬೇಕು ಮತ್ತು ಅವು ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠವಾಗಿರಬೇಕು ಎಂದು ಬಾನ್ ವಿಶ್ವಸಂಸ್ಥೆ ಮುಖ್ಯಕಚೇರಿಯಲ್ಲಿ ವರದಿಗಾರರಿಗೆ ತಿಳಿಸಿದರು.ಉತ್ತರದಾಯಿತ್ವ ಮತ್ತು ಪೂರ್ಣ ಪಾರದರ್ಶಕತೆಯ ಅಂತಾರಾಷ್ಟ್ರೀಯ ಕರೆಗೆ ಶ್ರೀಲಂಕಾ ಸರ್ಕಾರ ಮನ್ನಣೆ ನೀಡಬೇಕೆಂದು ತಿಳಿಸಿದ ಅವರು, ಮಾನವ ಹಕ್ಕು ದಮನ ನಡೆದ ವಿಶ್ವಾಸಾರ್ಹ ಆರೋಪಗಳು ಕೇಳಿಬಂದಾಗಲೆಲ್ಲ ಸೂಕ್ತ ತನಿಖೆ ನಡೆಯಬೇಕೆಂದು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಾಂಗ್ಲಾದಲ್ಲಿ ದಾವೂದ್ ಜಾಲ ವಿಸ್ತರಣೆಗೆ ನೆರವು
ಡೇ ಕೇರ್ ಸೆಂಟರ್‌ನಲ್ಲಿ ಬೆಂಕಿಗೆ 29 ಮಕ್ಕಳು ಬಲಿ
78 ಜನರಿಗೆ ತೀವ್ರ ಹುಡುಕಾಟ
ವಿದ್ಯಾರ್ಥಿಗಳ ಮೇಲೆ ಮುಂದುವರಿದ ದಾಳಿ
ಭಾರತ-ಪಾಕ್ ಬಿಕ್ಕಟ್ಟಿನಿಂದ ಉಗ್ರರಿಗೆ ಲಾಭ: ಗಿಲಾನಿ
ಪಾರ್ಸೆಲ್ ಬಾಂಬ್ ಸ್ಪೋಟಕ್ಕೆ ಪಾಕ್ ಸಂಸದ ಗಾಯ