ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಿಮಾನ ಅಪಘಾತ: ಭಯೋತ್ಪಾದನೆ ದಾಳಿ ಶಂಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ಅಪಘಾತ: ಭಯೋತ್ಪಾದನೆ ದಾಳಿ ಶಂಕೆ
ಫ್ರಾನ್ಸ್‌ನ ಫ್ಲೈಟ್ ಎಎಫ್‌ 447 ವಿಮಾನ ಕೆಟ್ಟ ಹವಮಾನ ಪರಿಸ್ಥಿತಿಯಿಂದ ಅಟ್ಲಾಂಟಿಕ್ ಸಾಗರಕ್ಕೆ ಬಿದ್ದು ಅಪಘಾತಕ್ಕೀಡಾಯಿದೇ ಅಥವಾ ಬೇರೆ ಏನಾದರೂ ಸಂಭವಿಸಿದೆಯೇ? ಈ ಮುಂಚೆ ತಳ್ಳಿಹಾಕಲಾದ ಭಯೋತ್ಪಾದನೆ ದಾಳಿ ಸಾಧ್ಯತೆಯು ಈಗ ಮತ್ತೆ ಸುಳಿಯುತ್ತಿದೆ.

ಭಯೋತ್ಪಾದನೆ ದಾಳಿ ಸಾಧ್ಯತೆಯನ್ನು ತಾವು ತಳ್ಳಿಹಾಕಿಲ್ಲವೆಂದು ಫ್ರೆಂಚ್ ರಕ್ಷಣಾ ಸಚಿವರು ಹೇಳಿದ್ದಾರೆ. 228 ಜನರಿದ್ದ ವಿಮಾನ ಭಾನುವಾರ ಕಣ್ಮರೆಯಾದ ಬಳಿಕ ಅದರ ಅವಶೇಷಗಳನ್ನು ಹುಡುಕಲು ನಡೆಸಿದ ಅವಿರತ ಯತ್ನ ನಿಷ್ಫಲವಾಯಿತು. ಶೋಧನಾ ತಂಡ ಸರಿಯಾದ ಜಲಪ್ರದೇಶದಲ್ಲಿ ಹುಡುಕುತ್ತಿದೆಯೇ ಎನ್ನುವ ಸಂಶಯವೂ ಈಗ ಆವರಿಸಿದೆ.

ಜೆಟ್ ಅವಶೇಷ ಪತ್ತೆಹಚ್ಚಲು ಫ್ರೆಂಚ್ ನೌಕೆಯು ಪರಮಾಣು ಜಲಾಂತರ್ಗಾಮಿಯನ್ನು ಕಳಿಸುತ್ತಿದ್ದು ವಿಮಾನ ಹೇಗೆ ಅಪಘಾತಕ್ಕೆ ಈಡಾಯಿತೆಂಬುದು ತಜ್ಞರಿಗೆ ಒಗಟಾಗಿಯೇ ಉಳಿದಿದೆ. ದೊಡ್ಡ ಜೆಟ್ ವಿಮಾನಗಳಲ್ಲಿ ಹಾರಾಟದ ವೇಗದ ಮೇಲೆ ಪರಿಣಾಮ ಬೀರುವ ಉಪಕರಣಗಳನ್ನು ಬದಲಿಸಲು ಈ ನಡುವೆ ಏರ್‌ಫ್ರಾನ್ಸ್ ನಿರ್ಧರಿಸಿದೆ.

ಅಪಘಾತಕ್ಕೆ ಉಪಕರಣದ ಸಂಭವನೀಯ ಪಾತ್ರದ ಬಗ್ಗೆ ತನಿಖೆದಾರರು ಗಮನಹರಿಸಿದ್ದಾರೆ. ಇವೆಲ್ಲ ನಿಗೂಢತೆಗೂ ಉತ್ತರ ಕಪ್ಪುಪೆಟ್ಟಿಗೆಯಲ್ಲಿ ಹುದುಗಿದ್ದು, ಅದು ಸಿಗುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ಸೇನೆ ಬಲವರ್ಧನೆಗೆ ಅಮೆರಿಕ ನೆರವು ಬಳಕೆ
ಬಿಪಿಒಗಳನ್ನು ಸೆಳೆಯಲಿರುವ ವ್ಯಾಘ್ರಮುಕ್ತ ಶ್ರೀಲಂಕಾ
ಇಬ್ಬರು ಪ್ರಮುಖ ತಾಲಿಬಾನ್ ಮುಖಂಡರು ಹತ
ಶ್ರೀಲಂಕಾ ಯುದ್ಧಾಪರಾಧಗಳ ತನಿಖೆಗೆ ಬಾನ್ ಒತ್ತಾಯ
ಬಾಂಗ್ಲಾದಲ್ಲಿ ದಾವೂದ್ ಜಾಲ ವಿಸ್ತರಣೆಗೆ ನೆರವು
ಡೇ ಕೇರ್ ಸೆಂಟರ್‌ನಲ್ಲಿ ಬೆಂಕಿಗೆ 29 ಮಕ್ಕಳು ಬಲಿ