ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತ ಸೇನೆಯಿಂದ ಒತ್ತುವರಿ ತಳ್ಳಿಹಾಕಿದ ನೇಪಾಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ ಸೇನೆಯಿಂದ ಒತ್ತುವರಿ ತಳ್ಳಿಹಾಕಿದ ನೇಪಾಳ
ಡಾಂಗ್ ಮತ್ತು ಬಾರಾ ಗಡಿ ಜಿಲ್ಲೆಗಳಲ್ಲಿ ಬಾರತೀಯ ಭದ್ರತಾಪಡೆ ಒತ್ತುವರಿ ಮಾಡಿದೆ ಎಂಬ ಆರೋಪವನ್ನು ನೇಪಾಳ ಸರ್ಕಾರ ತಳ್ಳಿಹಾಕಿದ್ದು, ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷ್ಯಾಧಾರವಿಲ್ಲವೆಂದು ತಿಳಿಸಿದೆ.

ನೇಪಾಳಕ್ಕೆ ಭಾರತದ ರಾಯಭಾರಿ ರಾಕೇಶ್ ಸೂದ್ ಜತೆ ಭೇಟಿ ಬಳಿಕ ವಿದೇಶಾಂಗ ಸಚಿವೆ ಸುಜಾತಾ ಕೊಯಿರಾಲಾ ವರದಿಗಾರರ ಜತೆ ಮಾತನಾಡುತ್ತಾ, ಆರಂಭಿಕ ವರದಿಗಳ ಪ್ರಕಾರ, ಭಾರತೀಯ ಭದ್ರತಾಪಡೆಯಿಂದ ಸ್ಥಳೀಯರ ಕಿರುಕುಳ ಮತ್ತು ಭೂಮಿಒತ್ತುವರಿ ನಡೆಸಿರುವುದು ಸರ್ಕಾರಕ್ಕೆ ಕಂಡಬಂದಿಲ್ಲವೆಂದು ಹೇಳಿದ್ದಾರೆ.

ಭಾರತೀಯ ಭದ್ರತಾಪಡೆಗಳು ಡಾಂಗ್ ಮತ್ತು ಬಾರಾ ಜಿಲ್ಲೆಗಳ ಗಡಿಯನ್ನು ಅತಿಕ್ರಮಿಸಿ ಅಲ್ಲಿನ ಕಂಬಗಳನ್ನು ಸ್ಥಳಾಂತರಿಸಿತ್ತೆಂದು ಮಾವೋವಾದಿಗಳ ಆರೋಪದ ಹಿನ್ನೆಲೆಯಲ್ಲಿ ಕೊಯಿರಾಲಾ ಪ್ರತಿಕ್ರಿಯೆ ಹೊರಬಿದ್ದಿದೆ.

ನೇಪಾಳ ಮಾಧ್ಯಮದ ಒಂದು ವರ್ಗ ಕೂಡ ಭಾರತದ ವಿರುದ್ಧ ಮೇಲಿನ ಆರೋಪಗಳನ್ನು ಹೊರಿಸಿತ್ತು. ಈ ಆರೋಪಗಳು ಸಂಪೂರ್ಣ ಸುಳ್ಳಾಗಿದ್ದು, ಕಟ್ಟುಕತೆಯಾಗಿದೆ ಎಂದು ರಾಯಭಾರಿ ಸೂದ್ ಹೇಳಿದ್ದು, ನೆರೆಹೊರೆಯ ರಾಷ್ಟ್ರಗಳ ನಡುವೆ ಸ್ನೇಹಬಾಂಧವ್ಯ ಧಕ್ಕೆಗೆ ಕೆಲವು ಜನರು ವದಂತಿಗಳನ್ನು ಹರಡುತ್ತಿದ್ದಾರೆಂದು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಮಾನ ಅಪಘಾತ: ಭಯೋತ್ಪಾದನೆ ದಾಳಿ ಶಂಕೆ
ಪಾಕ್ ಸೇನೆ ಬಲವರ್ಧನೆಗೆ ಅಮೆರಿಕ ನೆರವು ಬಳಕೆ
ಬಿಪಿಒಗಳನ್ನು ಸೆಳೆಯಲಿರುವ ವ್ಯಾಘ್ರಮುಕ್ತ ಶ್ರೀಲಂಕಾ
ಇಬ್ಬರು ಪ್ರಮುಖ ತಾಲಿಬಾನ್ ಮುಖಂಡರು ಹತ
ಶ್ರೀಲಂಕಾ ಯುದ್ಧಾಪರಾಧಗಳ ತನಿಖೆಗೆ ಬಾನ್ ಒತ್ತಾಯ
ಬಾಂಗ್ಲಾದಲ್ಲಿ ದಾವೂದ್ ಜಾಲ ವಿಸ್ತರಣೆಗೆ ನೆರವು