ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಏರ್‌ಫ್ರಾನ್ಸ್ ಅವಶೇಷದಿಂದ 17 ದೇಹಗಳು ಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್‌ಫ್ರಾನ್ಸ್ ಅವಶೇಷದಿಂದ 17 ದೇಹಗಳು ಪತ್ತೆ
ಅಂಟ್ಲಾಂಟಿಕ್ ಸಾಗರದಲ್ಲಿ ಅಪಘಾತಕ್ಕೀಡಾದ ಏರ್ ಫ್ರಾನ್ಸ್ ವಿಮಾನದ ಅವಶೇಷ ಕೊನೆಗೂ ಪತ್ತೆಯಾಗಿದ್ದು, ಅವಶೇಷದಿಂದ 17 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ದೋಷಪೂರಿತ ಸ್ಪೀಡೊಮೀಟರ್‌ನಿಂದ ದುರಂತ ಸಂಭವಿಸಿದೆಯೇ ಎಂದು ತನಿಖೆದಾರರು ಶೋಧ ನಡೆಸುತ್ತಿದ್ದಾರೆ. ಬ್ರೆಜಿಲ್ ಈಶಾನ್ಯ ತೀರಕ್ಕೆ 1150 ಕಿಮೀ ದೂರದಲ್ಲಿ ಅಲೆಗಳಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ 15 ದೇಹಗಳನ್ನು ಪತ್ತೆಹಚ್ಚಲಾಗಿದೆ.

ಶೋಧಕ ತಂಡವು ಕೆಟ್ಟ ಹವಾಮಾನ ಪರಿಸ್ಥಿತಿ ನಡುವೆ ಇನ್ನೂ ಕೆಲವು ದೇಹಗಳನ್ನು ಸೀಟುಗಳ ಮತ್ತು ವಿಮಾನದ ಇತರ ಅವಶೇಷಗಳ ನಡುವೆ ತೇಲುತ್ತಿರುವುದನ್ನು ಪತ್ತೆಹಚ್ಚಿದೆ ಎಂದು ಬ್ರೆಜಿಲ್ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ಏರ್‌ಬಸ್ ಎ330ರಿಂದ ಹತ್ತಾರು ಬಿಡಿಭಾಗಗಳನ್ನು ಶೋಧಕ ತಂಡ ಪತ್ತೆಹಚ್ಚಿತೆಂದು ವಾಯುಪಡೆ ವಕ್ತಾರ ಲೆ.ಕರ್ನಲ್ ಹೆನ್ರಿ ಮುನೋಜ್ ವರದಿಗಾರರಿಗೆ ತಿಳಿಸಿದರು.

ಪತ್ತೆಯಾದ ದೇಹಗಳನ್ನು ಹಡಗಿನಲ್ಲಿ ಬ್ರೆಜಿಲ್‌ನ ಅಟ್ಲಾಂಟಿಕ್ ಆರ್ಕಿಪೆಲೆಗೊಗೆ ಒಯ್ದು, ಅಲ್ಲಿಂದ ಗುರುತುಪತ್ತೆಗಾಗಿ ರಿಸೈಫ್‌ಗೆ ತರಲಾಗುವುದು ಎಂದು ಮುನೋಜ್ ತಿಳಿಸಿದರು. ಶನಿವಾರ, ಬ್ರೆಜಿಲ್ ನೌಕಾಪಡೆ ಸಿಬ್ಬಂದಿ ರಿಸೈಫ್‌ನಿಂದ 1150 ಕಿಮೀ ದೂರದ ವಲಯದಲ್ಲಿ ಇಬ್ಬರು ಪ್ರಯಾಣಿಕರ ದೇಹಗಳನ್ನು ಪತ್ತೆಹಚ್ಚಿತ್ತು.

ಕಾರ್ಯಾಚರಣೆಯಲ್ಲಿ ತೊಡಗಿದ್ದ ಫ್ರೆಂಚ್ ನೌಕಾಪಡೆ ಹಡಗು ಮತ್ತು ಬ್ರೆಜಿಲ್ ನೌಕಾಸಿಬ್ಬಂದಿಯು ಭಾನುವಾರ ಇನ್ನೂ 15 ಮಂದಿಯ ದೇಹವನ್ನು ಪತ್ತೆಹಚ್ಚಿದೆ. 15 ದೇಹಗಳಲ್ಲಿ ನಾಲ್ವರು ಪುರುಷರು ಮತ್ತು ನಾಲ್ವರು ಮಹಿಳೆಯರು ಸೇರಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಸ್ಟ್ರೇಲಿಯಾ: 1,006 ಹಂದಿ ಜ್ವರ ಪ್ರಕರಣ
ಸಯೀದ್ ವಿರುದ್ಧ ಪಾಕ್ ಸಾಕ್ಷ್ಯ ಒದಗಿಸಿಯೇ ಇಲ್ಲ: ಕೋರ್ಟ್
ಆಸ್ಟ್ರೇಲಿಯ: ಭಾರತೀಯ ವಿದ್ಯಾರ್ಥಿ ಕಾರಿಗೆ ಬೆಂಕಿ
ಲೆಬೆನಾನ್‌‌ನಲ್ಲಿ ಶಾಂತಿಯುತ ಮತದಾನ
ಮೆಲ್ಪೋರ್ನ್: ಪೋಷಕರಿಂದಲೇ ಮಗುವಿನ ಹತ್ಯೆ
ಶ್ರೀಲಂಕಾ ವಿಜಯೋತ್ಸವದ ವಿರುದ್ಧ ಬಾನ್ ಎಚ್ಚರಿಕೆ