1967ರಲ್ಲಿ ಕಳವಾಗಿ 39 ವರ್ಷಗಳ ಬಳಿಕ ಪತ್ತೆಯಾದ ಅಬ್ರಾಹಂ ಲಿಂಕನ್ ಅವರಿಗೆ ಸಂಬಂಧಿಸಿದ ಅಂಚೆಚೀಟಿಯೊಂದು 430,000 ಡಾಲರ್‌ಗಿಂತ ಹೆಚ್ಚಿನ ಮೌಲ್ಯಕ್ಕೆ ಹರಾಜಿನಲ್ಲಿ ಮಾರಾಟವಾಗಿದೆ.ಮ್ಯಾನ್‌ಹ್ಯಾಟ್ಟನ್ ರಾಬರ್ಟ್ ಎ. ಸೀಗಲ್ ಗ್ಯಾಲರಿಯಲ್ಲಿ ಶನಿವಾರ ಈ ಅಂಚೆಚೀಟಿಯಿದ್ದ ಲಕೋಟೆಯನ್ನು ಹರಾಜು ಹಾಕಲಾಯಿತು.
ಈ ಅಂಚೆ ಚೀಟಿಯನ್ನು ಆರ್ಥರ್ ಕೆ.ಎಂ. ವೂ ಎಂಬ ವೈದ್ಯ ಖರೀದಿಸಿದ್ದು, ಅವರ ಖಾಸಗಿ ವಿಚಾರಗಳ ಬಗ್ಗೆ ಏನನ್ನೂ ಬಹಿರಂಗಮಾಡಿಲ್ಲ. 90 ಸೆಂಟ್ಸ್ ಮೌಲ್ಯದ ಲಿಂಕನ್ ಅಂಚೆಚೀಟಿಗೆ 3 ಲಕ್ಷದಿಂದ 4 ಲಕ್ಷ ಡಾಲರ್ ಮಾರಾಟ ಪೂರ್ವದ ಅಂದಾಜಿನ ವಿರುದ್ಧವಾಗಿ ಅವರು 431,250 ಡಾಲರ್ ಪಾವತಿ ಮಾಡಿದ್ದಾರೆ.
ಐಸ್ ಹೌಸ್ ಕವರ್ ಶೇ.90ರಷ್ಟು ಲಿಂಕನ್‌ಗೆ ಸಂಬಂಧಿಸಿದ್ದು, ಬೋಸ್ಟನ್ ಐಸ್ ಕಂಪೆನಿಯಿಂದ 1873ರಲ್ಲಿ ಭಾರತದ ಐಸ್ ಹೌಸ್‌ಗೆ ಕಳಿಸಲಾಗಿತ್ತು. ಇಂಡಿಯಾನಪೊಲೀಸ್‌ನ ಮಾಲೀಕರ ಸುರಕ್ಷೆಯಿಂದ ಅಂಚೆಚೀಟಿ ಕಾಣೆಯಾಗಿ ಸುಮಾರು 40 ವರ್ಷಗಳ ಬಳಿಕ 300 ಕಿಮೀ ದೂರದ ಚಿಕಾಗೊದ ಮನೆಯೊಂದರಲ್ಲಿ ಪತ್ತೆಯಾಗಿತ್ತು. |