ಶ್ರೀಲಂಕಾ ಸೇನೆಯ ದಾಳಿಯಿಂದ ನೆಲಕಚ್ಚಿದ ತಮಿಳು ಬಂಡುಕೋರರು ಬಳಸಿದ್ದರೆಂದು ನಂಬಲಾದ ಜಲಾಂತರ್ಗಾಮಿಯೊಂದನ್ನು ಶ್ರೀಲಂಕಾ ಪಡೆಗಳು ಪತ್ತೆಹಚ್ಚಿದೆಯೆಂದು ಮಿಲಿಟರಿ ಸೋಮವಾರ ತಿಳಿಸಿದೆ. 24 ಅಡಿಗಳ ಉದ್ದದ ಜಲಾಂತರ್ಗಾಮಿಯನ್ನು ಎಲ್‌ಟಿಟಿಇ ಕಳೆದ ತಿಂಗಳು ಸೋಲಪ್ಪಿದ ಮುಲ್ಲೈತಿವು ಈಶಾನ್ಯ ಜಿಲ್ಲೆಯಲ್ಲಿ ಸೇನಾಪಡೆಗಳು ಪತ್ತೆಹಚ್ಚಿವೆ. ಎಲ್‌ಟಿಟಿಇ ನಿರ್ಮೂಲನೆಗೆ ಮುಂಚೆ ಸಮುದ್ರದಲ್ಲಿ ರಹಸ್ಯ ಚಲನವಲನಗಳ ಸಲುವಾಗಿ ಎಲ್‌ಟಿಟಿಇಯ ಹಿರಿಯ ನಾಯಕರು ಬಳಸಿದ್ದರೆಂದು ಮಿಲಿಟರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇನ್ನೂ ಹಲವು ವ್ಯಾಘ್ರ ಪಡೆಯ ಸಬ್ಮೆರೀನ್ಗಳು ಇದಕ್ಕೆ ಮುಂಚೆ ಪತ್ತೆಯಾಗಿದ್ದರೂ ಇತ್ತೀಚಿನದು ವಾಸ್ತವವಾಗಿ ಬಳಸಲಾದ ಮೊದಲ ಉಪಕರಣವೆಂದು ಹೇಳಲಾಗಿದೆ. ವ್ಯಾಘ್ರಪಡೆಯ ಸೋಲಿನ ಬಳಿಕ ಅತ್ಯಧಿಕ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡನ್ನು ಕೂಡ ಸೇನಾಪಡೆಗಳು ಬಯಲು ಮಾಡಿದ್ದಾಗಿ ರಕ್ಷಣಾಸಚಿವಾಲಯ ತಿಳಿಸಿದೆ. 2 ದಿನಗಳ ಶೋಧದಲ್ಲಿ ನೂರಾರು ಸ್ವಯಂಚಾಲಿತ ಬಂದೂಕುಗಳು, ಮೋರ್ಟಾರ್ ಬಾಂಬ್‌ಗಳು ಮತ್ತು ನೆಲಬಾಂಬ್‌ಗಳು ಪತ್ತೆಯಾಗಿವೆ. |