ಹಾಕ್ ನದಿಯಲ್ಲಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿ 11ರ ಪ್ರಾಯದ ಬಾಲಕ ಸೇರಿದಂತೆ ಭಾರತೀಯ ಮೂಲದ ಮೂವರು ಸತ್ತಿದ್ದಾರೆ. ಆಲ್ಬನಿ ಮೂಲದ ಹೊಟೆಲ್ ಮಾಲೀಕ ಜಾರ್ಜ್ ಕೊಲಾಥ್ ಕೇರಳದವರಾಗಿದ್ದು, ತಮ್ಮ ಪುತ್ರ ಮತ್ತು ವೈದ್ಯ ಸ್ನೇಹಿತರೊಬ್ಬರ ಜತೆ ಪೈಪರ್ ಚೆರೋಕಿ ವಿಮಾನದಲ್ಲಿ ಬಿಡುವಿನ ಪ್ರವಾಸ ತೆರಳಿದ್ದಾಗ ಮೊಹಾಕ್ ವ್ಯಾಲಿ ವಿಮಾನನಿಲ್ದಾಣದಿಂದ ತೆರಳಿದ ವಿಮಾನ ಅಪಘಾತಕ್ಕೀಡಾಗಿ ನದಿಗೆ ಬಿತ್ತೆಂದು ಫೆಡರಲ್ ವೈಮಾನಿಕ ಆಡಳಿತ ವಕ್ತಾರ ಜಿಮ್ ಪೀಟರ್ಸ್ ತಿಳಿಸಿದರು.
ಕೊಲಾತ್ ಪುತ್ರ ಮತ್ತು ವೈದ್ಯರ ದೇಹ ಪತ್ತೆಯಾಗಿವೆಯೆಂದು ಕೊಲಾಥ್ ಬಾವಮೈದುನ ಅನಿಲ್ ಪಾಲೋಸ್ ತಿಳಿಸಿದ್ದಾರೆ.
ಆಲ್ಬೆನಿಯಲ್ಲಿ ಅನೇಕ ಹೊಟೆಲ್ಗಳ ಮಾಲೀಕ ಮತ್ತು 40 ಮಿಲಿಯ ಡಾಲರ್ ಕ್ಯಾಸಲ್ ಮಾಲೀಕರಾದ ಕೊಲಾಥ್ ದೇಹವಿನ್ನೂ ಪತ್ತೆಯಾಗಿಲ್ಲವೆಂದು ಸ್ಥಳೀಯ ಮಾಧ್ಯಮವು ವರದಿಮಾಡಿದೆ. ಕಗ್ಗತ್ತಲು ಕವಿದಿದ್ದರಿಂದ ಶೋಧಕಾರ್ಯ ನಿಲ್ಲಿಸಲಾಯಿತು. |