ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ರಷ್ಯಾದಲ್ಲಿ ಪರಸ್ಪರ ಕೈಕುಲುಕಿದ ಸಿಂಗ್, ಜರ್ದಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಷ್ಯಾದಲ್ಲಿ ಪರಸ್ಪರ ಕೈಕುಲುಕಿದ ಸಿಂಗ್, ಜರ್ದಾರಿ
webdunia
ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಪಾಕ್ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರ ನಡುವೆ ಭೇಟಿ ನಡೆಯುವುದಕ್ಕೆ ಮುಂಚಿತವಾಗಿ ಇಲ್ಲಿನ ಎಸ್‌ಸಿಒ ಶೃಂಗಸಭೆಯಲ್ಲಿ ಮಂಗಳವಾರ ಮುಖಾಮುಖಿಯಾದ ಮುಖಂಡದ್ವಯರು ಪರಸ್ಪರ ಕೈಕುಲುಕಿದರು. ಶಾಂಘಾಯ್ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳಾದ ರಷ್ಯಾ, ಚೀನಾ, ಕಜಕಸ್ತಾನ, ತಜಕಿಸ್ತಾನ, ಕಿರ್ಗಿಸ್ತಾನ ಮತ್ತು ಉಜ್ಬೆಕಿಸ್ತಾನದ ನಾಯಕರ ಜತೆ ಸಮ‌ೂಹ ಛಾಯಾಚಿತ್ರಕ್ಕೆ ಭಂಗಿ ನೀಡಿದ ಬಳಿಕ ಸಿಂಗ್ ಮತ್ತು ಜರ್ದಾರಿ ಪರಸ್ಪರ ಕೈಕುಲುಕಿದರು.

ಶೃಂಗಸಭೆಯಲ್ಲಿ ನೇಪಥ್ಯದಲ್ಲಿ ಉಭಯ ನಾಯಕರು ಮಂಗಳವಾರ ಮಧ್ಯಾಹ್ನ ಭೇಟಿಯಾಗಲಿದ್ದು, ಮಾತುಕತೆ ನಡೆಸಲಿದ್ದಾರೆ. ಮುಂಬೈ ಭಯೋತ್ಪಾದನೆ ದಾಳಿ ಬಳಿಕ ಇದು ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಪ್ರಥಮ ಉನ್ನತ ಮಟ್ಟದ ಸಂಪರ್ಕವೆಂದು ಹೇಳಲಾಗಿದೆ. ಎಸ್‌ಸಿಒ ಶೃಂಗಸಭೆಯಲ್ಲದೇ ಪ್ರಧಾನಮಂತ್ರಿಯು ಬ್ರೆಜಿಲ್-ರಷ್ಯಾ-ಭಾರತ-ಚೀನಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮನಮೋಹನ್ ಸಿಂಗ್ ಅವರು ಪಾಕ್ ಅಧ್ಯಕ್ಷರನ್ನು ಭೇಟಿ ಮಾಡುವ ಬಗ್ಗೆ ವಿಭಿನ್ನ ನಿಲುವು ವ್ಯಕ್ತವಾಗಿದೆ. ಪಾಕಿಸ್ತಾನವು ಮುಂಬೈ ಭಯೋತ್ಪಾದನೆ ದಾಳಿಯ ಸೂತ್ರಧಾರ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಬಿಡುಗಡೆ ಮಾಡಿದ್ದು, ಭಾರತದ ಮೇಲೆ ಗುರಿಯಿಟ್ಟ ಭಯೋತ್ಪಾದನೆ ನಿಭಾಯಿಸುವ ಬಗ್ಗೆ ಅಷ್ಟೊಂದು ಗಂಭೀರತೆ ಹೊಂದಿಲ್ಲವೆಂದು ಕೆಲವರ ಅಭಿಪ್ರಾಯ.

ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಶೀತಲ ಯುದ್ಧವನ್ನು ಭಯೋತ್ಪಾದಕರು ಬಯಸಿದ್ದು, ಶಾಂತಿಯುತ ಬಾಂಧವ್ಯದಿಂದ ಅದಕ್ಕೆ ಸೋಲುಂಟಾಗಬಹುದು ಎಂದು ಎರಡನೇ ಅಭಿಪ್ರಾಯ ವ್ಯಕ್ತವಾಗಿದೆ. ಆದ್ದರಿಂದ ಈಗ ಎಲ್ಲರ ಕಣ್ಣು ರಷ್ಯಾದಲ್ಲಿ ನಡೆಯುವ ನಿರ್ಣಾಯಕ ಭೇಟಿಯ ಮೇಲೆ ನೆಟ್ಟಿದೆ. ಆದಾಗ್ಯೂ, ಭಾರತ ಸರ್ಕಾರ ಪಾಕ್ ವಿರುದ್ಧ ತಾಳಿದ್ದ ಕಠಿಣ ಧೋರಣೆಯನ್ನು ಮೆದುಗೊಳಿಸಿದೆಯೇ ಮತ್ತು ಸಮಗ್ರ ಮಾತುಕತೆ ಪುನಾರಂಭಕ್ಕೆ ಇಚ್ಛಿಸಿದೆಯೇ ಎನ್ನುವುದು ಈಗಿನ ಪ್ರಶ್ನೆಯಾಗಿ ಉಳಿದಿದೆ.

ಹಫೀಜ್ ಸಯೀದ್ ಸಾಂಕೇತಿಕ ಬಂಧನ, ಬಳಿಕ ಬಿಡುಗಡೆಯಿಂದ ಉದ್ವಿಗ್ನಕಾರಿ ವಾತಾವರಣ ಮ‌ೂಡಿ, ಪಾಕಿಸ್ತಾನ ಭಯೋತ್ಪಾದನೆ ಮ‌ೂಲೋತ್ಪಾಟನೆಗೆ ಪ್ರಾಮಾಣಿಕ ಪ್ರಯತ್ನ ಮಾಡುವ ತನಕ ಮಾತುಕತೆಯಿಲ್ಲವೆಂದು ಭಾರತ ಖಡಾಖಂಡಿತವಾಗಿ ಹೇಳಿತ್ತು. ಆದರೆ ಈಗ ಭಾರತ ಸರ್ಕಾರ ತನ್ನ ನಿಲುವನ್ನು ಮೆದುಗೊಳಿಸುವ ಲಕ್ಷಣಗಳು ಕಂಡುಬಂದಿದೆ. ಸಿಂಗ್ ಮತ್ತು ಜರ್ದಾರಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದ್ದು, ಸಮಗ್ರ ಮಾತುಕತೆ ಪ್ರಕ್ರಿಯೆ ಪುನಾರಂಭ ಆಗದಿರಬಹುದು ಎಂದು ಮ‌ೂಲಗಳು ಹೇಳಿವೆ. ಮಾತುಕತೆ ಆರಂಭವಾದರೂ ಅದು ಭಿನ್ನ ಸ್ವರೂಪದಲ್ಲಿರುತ್ತದೆಂದು ಮ‌ೂಲಗಳು ಹೇಳಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂತ್ರಸ್ತರ ಪುನರ್ವಸತಿ ದೊಡ್ಡ ಸವಾಲು: ರಾಜಪಕ್ಷ
ಉತ್ತರ ಕೆರೊಲಿನದಲ್ಲೊಂದು ಬಾಲಾಜಿ ಮಂದಿರ
ಅಪಘಾತಕ್ಕೆ ಭಾರತೀಯ ಮ‌ೂಲದ ಮ‌ೂವರ ಸಾವು
ತಾಲಿಬಾನ್‌ ಉಗ್ರರು ಭಾರತಕ್ಕೂಪ್ರವೇಶ: ಪಾಕ್‌
20ಕ್ಕಿಂತ ಹೆಚ್ಚು ಹಂದಿಜ್ವರ ಪ್ರಕರಣ: ದೃಢಿಕರಿಸಿದ ಚೀನಾ
ತಾಲಿಬಾನ್ ವಿರುದ್ಧ ಪಾಕ್ ಪೂರ್ಣಸ್ವರೂಪದ ದಾಳಿ