ಮಧ್ಯಪ್ರಾಚ್ಯ ಪ್ರತಿನಿಧಿ ಟೋನಿ ಬ್ಲೇರ್ ಪೆಲೆಸ್ಟೀನಿಯ ಅಧ್ಯಕ್ಷ ಮಹಮದ್ ಅಬ್ಬಾಸ್ ಅವರನ್ನು ಮಂಗಳವಾರ ಭೇಟಿ ಮಾಡಿದರು. ಶಾಂತಿ ಒಪ್ಪಂದಕ್ಕೆ ಇಸ್ರೇಲಿ ಪ್ರಧಾನಮಂತ್ರಿ ನೆತಾನ್ಯಾಹು ಷರತ್ತುಗಳಿಗೆ ಪೆಲೆಸ್ಟೀನಿಯ ವ್ಯಕ್ತಪಡಿಸಿದ ನಿರಾಶೆ ನಡುವೆ ಟೋನಿ ಬ್ಲೇರ್ ಭೇಟಿ ನಡೆದಿದೆ.
ಗಾಜಾ ನಗರದ ವಿಶ್ವಸಂಸ್ಥೆ ಕೇಂದ್ರಕ್ಕೆ ಬ್ಲೇರ್ ಭೇಟಿ ಮಾಡಿ ನೆತಾನ್ಯಾಹು ಭಾಷಣವನ್ನು ಒಂದು ಹೆಜ್ಜೆ ಮುನ್ನಡೆಯೆಂದು ಹೇಳಿದ್ದಾರೆ. ಪಶ್ಚಿಮ ದಂಡೆ ಮತ್ತು ಗಾಜಾಪಟ್ಟಿಯಲ್ಲಿ ಪ್ಯಾಲೆಸ್ಟೀನಿಯರ ಜೀವನದ ಸಂಕಷ್ಟಗಳನ್ನು ಪರಿಹರಿಸುವಂತೆ ಇಸ್ರೇಲ್‌ಗೆ ಅವರು ಕರೆ ನೀಡಿದರು.
ರಾಮಲ್ಲಾದ ಪಶ್ಚಿಮದಂಡೆ ನಗರದಲ್ಲಿರುವ ಅಧ್ಯಕ್ಷರ ಕಚೇರಿಯಲ್ಲಿ ಅಬ್ಬಾಸ್ ಜತೆ ಮಾತನಾಡಿದ ಬಳಿಕ ಮಧ್ಯಪ್ರಾಚ್ಯ ಶಾಂತಿ ಪ್ರಕ್ರಿಯೆಗೆ ನವೀಕೃತ ಗತಿ ಸಿಕ್ಕಿದೆಯೆಂದು ಹೇಳಿದರು. ಪ್ರಧಾನಮಂತ್ರಿ ನೆತಾನ್ಯಾಹು ಪರಿಕಲ್ಪನೆ ಮತ್ತು ಎರಡು ರಾಷ್ಟ್ರಗಳ ತತ್ವಗಳಿಗೆ ಬದ್ಧವಾಗಿರುವುದು ಕೂಡ ಒಂದು ಹೆಜ್ಜೆ ಮುನ್ನಡೆಯಾಗಿದೆಯೆಂದು ಬ್ಲೇರ್ ನುಡಿದರು. |