ಕಚ್ಚಾ ತೈಲ ಸಾಗಿಸುತ್ತಿದ್ದ ವಿಯೆಟ್ನಾಂ ಹಡಗೊಂದು ಸ್ಫೋಟಿಸಿ ವಿಯೆಟ್ನಾಂ ದಕ್ಷಿಣ ತೀರದಲ್ಲಿ ಮುಳುಗಿದ್ದರಿಂದ ಮೂವರು ನಾವಿಕರು ನಾಪತ್ತೆಯಾಗಿದ್ದಾರೆಂದು ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.
ನಾಪತ್ತೆಯಾದ ಸಿಬ್ಬಂದಿಗಾಗಿ ಹಡಗುಗಳು ಶೋಧನಡೆಸುತ್ತಿವೆಯೆಂದು ಶೋಧ ಮತ್ತು ರಕ್ಷಣೆ ಕೇಂದ್ರದ ಉಪಮುಖ್ಯಸ್ಥ ತಿಳಿಸಿದ್ದಾರೆ. ಇತರೆ 12 ಮಂದಿ ನಾವಿಕರನ್ನು ಅಪಾಯದಿಂದ ಪಾರುಮಾಡಲಾಗಿದ್ದು, ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಸ್ಪೋಟ ಸಂಭವಿಸಿದ್ದೇಕೆಂದು ತಿಳಿಯಲು ನಾವು ಹಡಗನ್ನು ಮೇಲೆತ್ತುವ ತನಕ ಕಾಯಬೇಕಾಗಿದೆಯೆಂದು ಅವರು ತಿಳಿಸಿದ್ದಾರೆ.
ಹಡಗು ಸುಮಾರು 1793 ಕ್ಯೂಬಿಕ್ ಮೀಟರ್ ಅಥವಾ 11300 ಬ್ಯಾರೆಲ್ ಕಚ್ಚಾತೈಲ ಮತ್ತು 10,000 ಲೀಟರ್ ಡೀಸೆಲ್ನ್ನು ಟ್ಯಾಂಕರ್ಗೆ ತುಂಬಿಸಲು ಸಾಗಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. |