ಉತ್ತರ ಇರಾಕ್‌ನಲ್ಲಿ ಅವಳಿ ಬಾಂಬ್ ಸ್ಫೋಟಗಳಿಂದ ಕನಿಷ್ಠ 34 ಜನರು ಹತರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಮೊಸುಲ್ ಬಳಿಕ ತಲಾಫರ್ ಪಟ್ಟಣದಲ್ಲಿ ಅವಳಿ ಬಾಂಬರ್‌ಗಳು ತಮ್ಮ ಸ್ಫೋಟಕಗಳನ್ನು ಸಿಡಿಸಿದ ಘಟನೆಯಲ್ಲಿ ಸುಮಾರು 60 ಜನರು ಗಾಯಗೊಂಡರು. ಅಮೆರಿಕದ ಪಡೆಗಳು ಇರಾಕಿನ ಪಟ್ಟಣಗಳು ಮತ್ತು ನಗರಗಳಿಂದ ತೆರವು ಮಾಡಿದ ಬಳಿಕ ಅತೀ ಮಾರಕ ದಾಳಿಗಳೆಂದು ಇವನ್ನು ಬಣ್ಣಿಸಲಾಗಿದೆ.
ಬಾಗ್ದಾದ್ ಸದರ್ ನಗರದಲ್ಲಿ ಎರಡು ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 7 ಜನರು ಸತ್ತಿದ್ದು 20 ಮಂದಿ ಗಾಯಗೊಂಡಿದ್ದಾರೆ. ಕರಾಡಾ ಪ್ರದೇಶದಲ್ಲಿ ರಸ್ತೆಬದಿಯ ಬಾಂಬ್ ಸ್ಫೋಟದಲ್ಲಿ ಒಬ್ಬ ನಾಗರಿಕ ಸತ್ತಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಇರಾಕ್ ಸೆಂಟ್ರಲ್ ಬ್ಯಾಂಕ್ ಗವರ್ನರ್ ಅವರ ಮೇಲೆ ಗುರಿಯಿರಿಸಿ ದಾಳಿ ಮಾಡಲಾಗಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ತುರ್ಕ್‌ಮೆನ್ ಜನಾಂಗೀಯ ಅಲ್ಪಸಂಖ್ಯಾತರು ಬಹಳಷ್ಟು ಇರುವ ತಲಾಫರ್‌ನ ದಾಳಿಯು 7.30ಕ್ಕೆ ಘಟಿಸಿದ್ದು, ಒಂದರ ಹಿಂದರೊಂದು ಎರಡು ಬಾಂಬ್‌ಗಳು ಸ್ಫೋಟಿಸಿವೆ. ಮೊದಲಿಗೆ ಪೊಲೀಸ್ ಸಮವಸ್ತ್ರ ಧರಿಸಿದ್ದ ಆತ್ಮಾಹುತಿ ಬಾಂಬರ್ ತನ್ನ ಸ್ಫೋಟಕಗಳ ಉಡುಪನ್ನು ಸ್ಫೋಟಿಸಿದ. ಜನರು ಮೊದಲ ಸ್ಫೋಟದ ಸ್ಥಳದಲ್ಲಿ ಕಲೆತಿದ್ದಾಗ ಎರಡನೇ ಸ್ಫೋಟ ಹಿಂದೆಯೇ ಸಂಭವಿಸಿತು. |