ಉರುಂಕಿಯಲ್ಲಿ ಜನಾಂಗೀಯ ಹಿಂಸಾಚಾರದಲ್ಲಿ 156 ಜನರು ಅಸುನೀಗಿದ ಹಿನ್ನೆಲೆಯಲ್ಲಿ ಶುಕ್ರವಾರದ ಪ್ರಾರ್ಥನೆಯನ್ನು ಸ್ಥಗಿತಗೊಳಿಸುವಂತೆ ಉರುಂಕಿಯ ಮಸೀದಿಗಳಿಗೆ ಆದೇಶಿಸಿರುವುದಾಗಿ ಚೀನಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ಸಿಂಜಿಯಾಂಗ್ ಪ್ರಾಂತ್ಯದ ಇನ್ನೊಂದು ನಗರದಲ್ಲಿ ವಿದೇಶಿಯರ ಭೇಟಿಯನ್ನು ಸ್ಥಗಿತಗೊಳಿಸಿದೆ.ಸರ್ಕಾರಿ ನೌಕರರೆಂದು ಗುರುತಿಸಲಾದ ಅಧಿಕಾರಿಣಿ ತಮ್ಮ ಹೆಸರನ್ನು ಹೇಳಲು ನಿರಾಕರಿಸಿದ್ದು, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಮಸೀದಿಗಳನ್ನು ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ ಮತ್ತು ಜನರು ಮನೆಯಲ್ಲೇ ಉಳಿದು ಪ್ರಾರ್ಥನೆ ಸಲ್ಲಿಸುವಂತೆ ಆದೇಶಿಸಿರುವುದಾಗಿ ಹೇಳಿದರು.
ಕಾಶ್‌ಗರ್ ಮತ್ತು ವಾಯವ್ಯ ಕ್ಸಿಂಜಿಯಾಂಗ್ ಅಧಿಕಾರಿಗಳು ಪತ್ರಕರ್ತರಿಗೆ ಮತ್ತಿತರ ವಿದೇಶಿಯರಿಗೆ ನಗರವನ್ನು ತ್ಯಜಿಸುವಂತೆ ತಿಳಿಸಿದ್ದಾರೆ. ಪ್ರವಾಸಿಗಳ ಸುರಕ್ಷತೆ ಖಾತರಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಅವರು ತಿಳಿಸಿದರು. |