ಮ್ಯಾನ್ಮಾರ್ ಪ್ರತಿಪಕ್ಷದ ನಾಯಕಿ ಆಂಗ್ ಸಾನ್ ಸೂಕಿಯ ವಿಚಾರಣೆ ಬಿಗಿ ಬಂದೋಬಸ್ತ್‌ನಲ್ಲಿ ಶುಕ್ರವಾರ ಆರಂಭವಾಗಿದ್ದು, ಪ್ರತಿವಾದಿ ಪರ ಸಾಕ್ಷಿಯೊಬ್ಬರು ಸಾಕ್ಷ್ಯ ಹೇಳಲು ನಿಗದಿಯಾಗಿದೆ. ಸೂಕಿಯ ನ್ಯಾಷನಲ್ ಲೀಗ್‌ನ ಸದಸ್ಯರಾದ ವಕೀಲೆ ಖಿನ್ ಮೊಯಿ ಮೊಯಿ ಸೂಕಿ ಪರವಾಗಿ ಸಾಕ್ಷ್ಯ ನುಡಿಯಲು ಇನ್‌ಸೇನ್ ಕೋರ್ಟ್‌ಗೆ ಬೆಳಿಗ್ಗೆ ಪ್ರವೇಶಿಸಿದರು.
ಬಂಧೀಖಾನೆ ಸುತ್ತ ಪೊಲೀಸರ ಭದ್ರತೆ ಬಿಗಿಯಾಗಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸೂಕಿಯ ವಕೀಲರ ತಂಡವು ಸೂಕಿಯನ್ನು ಭೇಟಿ ಮಾಡಿ ವಿಚಾರಣೆಯ ಬಗ್ಗೆ ಅವರಿಗೆ ವಿವರ ನೀಡಿದರು. ವಿಚಾರಣೆಯಲ್ಲಿ ಯಾವುದೇ ಸ್ಥಿತಿ ಎದುರಿಸಲು ಸೂಕಿ ಸಿದ್ಧರಿದ್ದಾರೆಂದು ವಕೀಲರಲ್ಲೊಬ್ಬರಾದ ನ್ಯಾನ್ ವಿನ್ ತಿಳಿಸಿದರು.
ಮ್ಯಾನ್ಮಾರ್ ಮಿಲಿಟರಿ ಜುಂಟಾ ವಿಶ್ವಸಂಸ್ಥೆ ಪ್ರಧಾನಿಕಾರ್ಯದರ್ಶಿ ಬಾನ್ ಕಿ ಮೂನ್ ಸೂಕಿಯವರನ್ನು ಭೇಟಿ ಮಾಡಲು ನಿರಾಕರಿಸಿತೆಂದು ಎನ್ಎಲ್‌ಡಿ ಅಧಿಕೃತ ವಕ್ತಾರರಾಗಿರುವ ನ್ಯಾನ್ ವಿನ್ ಮಾಹಿತಿ ನೀಡಿದರು. ಸೂಕಿ ಪ್ರಸಕ್ತ ವಿಚಾರಣೆ ಎದುರಿಸುತ್ತಿರುವುದರಿಂದ ಬಾನ್ ಭೇಟಿಯಿಂದ ನ್ಯಾಯಾಂಗಕ್ಕೆ ಪೂರ್ವಗ್ರಹ ಬಾವನೆ ಉಂಟಾಗಬಹುದು ಎನ್ನುವ ಆಧಾರದ ಮೇಲೆ ಭೇಟಿ ನಿರಾಕರಿಸಲಾಯಿತು. |