ಶಾಲೆಗಳಲ್ಲಿ ಧಾರ್ಮಿಕ ಚಿಹ್ನೆಯ ಉಡುಪುಗಳನ್ನು ಧರಿಸುವುದಕ್ಕೆ ನಿಷೇಧ ಮತ್ತು ಬುರ್ಖಾ ಧರಿಸುವುದಕ್ಕೆ ಮಹಿಳೆಯರಿಗೆ ನಿಷೇಧಿಸುವ ಉದ್ದೇಶಿತ ಕ್ರಮದ ಬಗ್ಗೆ ಫ್ರಾನ್ಸ್ ಸಮರ್ಥಿಸಿಕೊಂಡಿದೆ. ಭಾರತದ ಶತಕೋಟಿ ಜನರಿಗೆ ಹೋಲಿಸಿದರೆ ಫ್ರಾನ್ಸ್ ತೀರಾ ಸಣ್ಣದಾಗಿದ್ದು, ರಾಷ್ಟ್ರದ ಜಾತ್ಯತೀತ ಸ್ವರೂಪಕ್ಕೆ ಅಡ್ಡಿಯಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆಯೆಂದು ಅದು ತಿಳಿಸಿದೆ.
ಸಾರ್ವಜನಿಕ ಸ್ಥಳಗಲ್ಲಿ ಧಾರ್ಮಿಕ ಸಂಕೇತಗಳಿಗೆ ಸಂಬಂಧಿಸಿದಂತೆ ಫ್ರಾನ್ಸ್‌ನಲ್ಲಿ ನಿರ್ದಿಷ್ಟ ನಿಯಂತ್ರಣವಿದೆ. ಧರ್ಮದ ಆಚರಣೆ ಬಗ್ಗೆ ನಾವು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇವೆ. ಕೆಲವು ಧಾರ್ಮಿಕ ಮೂಲಭೂತವಾದಿಗಳು ಫ್ರಾನ್ಸ್ ಜಾತ್ಯತೀತ ನಿಯಮಗಳನ್ನು ಬದಲಿಸುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಭಾರತಕ್ಕೆ ಫ್ರಾನ್ಸ್ ರಾಯಭಾರಿಯಾಗಿರುವ ಜೆರೋಮ್ ಬೊನ್ನಾಫಾಂಟ್ ತಿಳಿಸಿದ್ದಾರೆ.
ಫ್ರೆಂಚ್ ಪ್ರದೇಶದೊಳಕ್ಕೆ ಬುರ್ಖಾಗೆ ಪ್ರವೇಶವಿಲ್ಲವೆಂದು ಸಾರ್ಕೋಜಿ ಹೇಳಿಕೆ ಕುರಿತು ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದರು. ಮೂಲಭೂತವಾದಿಗಳು ಮುಸ್ಲಿಮರಿಗೆ,ಯಹೂದಿಗಳಿಗೆ, ಕ್ಯಾಥೋಲಿಕ್ಕರಿಗೆ ಮತ್ತು ಬೌದ್ಧರಿಗೆ ವಿಶೇಷ ನಿಯಮಗಳನ್ನು ತರಲು ಒತ್ತಡ ಹಾಕುತ್ತಿದ್ದಾರೆ. ಇದು ನಮ್ಮ ಜಾತ್ಯತೀತ ಪರಿಕಲ್ಪನೆಗೆ ಸವಾಲು ಎಂದು ಅವರು ಹೇಳಿದರು.
ಸಾರ್ವಜನಿಕ ಶಾಲೆಗಳಲ್ಲಿ ಮಕ್ಕಳು ಧಾರ್ಮಿಕ ಚಿಹ್ನೆಗಳ ಬಳಕೆ ನಿಷೇಧಿಸಲು ಸಂಸತ್ತು ಬಳಿಕ ನಿರ್ಧರಿಸಿತು ಎಂದು ಅವರು ಹೇಳಿದ್ದಾರೆ.ಒಂದು ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತ ಏಕತೆಯಲ್ಲಿ ವೈವಿಧ್ಯತೆ ತತ್ವ ಪಾಲಿಸುತ್ತದೆ. ಆದರೆ ಫ್ರಾನ್ಸ್ ಸಣ್ಣ ರಾಷ್ಟ್ರವಾಗಿದ್ದು, ಒಂದೇ ಭಾಷೆ ಮಾತನಾಡುವ 6.2 ಮಿಲಿಯ ಜನರಿದ್ದಾರೆ ಮತ್ತು ನಾಗರಿಕ ನಿಯಮಗಳು ಒಂದೇ ರೀತಿಯಿಂದ ಕೂಡಿದೆ ಎಂದು ಪ್ರಮುಖ ಚಿಂತಕರ ತಂಡದ ಜತೆ ಸಮಾಲೋಚನೆಯಲ್ಲಿ ಅವರು ಹೇಳಿದರು. |