ಗುರುವಾರ ಯುವ ನಾಯಕಿ ಸಂಜುಕ್ತಗೆ ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಲಾ ಅಕ್ವಿಲಾದಲ್ಲಿ ಖುದ್ದಾಗಿ ಭೇಟಿ ಮಾಡುವ ಸುಯೋಗ ಲಭಿಸಿತು. 16 ವರ್ಷ ವಯೋಮಾನದ ಸಂಜುಕ್ತ ಪಾಂಗಿಯ ಸಣ್ಣ ಗ್ರಾಮ ಒರಿಸ್ಸಾದ ಕರಂಜಗುಡ ಇಟಲಿಯ ಜಿ-8 ನಾಯಕರು ಭೇಟಿಯಾಗಿರುವ ಲಾ ಅಕ್ವಿಲಾದಿಂದ ಸಾವಿರಾರು ಮೈಲು ದೂರವಿದೆ.
ಎಲ್ಲ ಮಕ್ಕಳೂ ವಿಶೇಷವಾಗಿ ಬಾಲಕಿಯರಿಗೆ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ ಸಿಗಬೇಕೆಂದು ಸಿಂಗ್ ಅವರಲ್ಲಿ ಸಂಜುಕ್ತ ತನ್ನ ಬಯಕೆ ತೋಡಿಕೊಂಡಳು.ತಾನು ವಿಶ್ವನಾಯಕರನ್ನು ಕೇಳಲು ಸಾಧ್ಯವಾಗುವುದಾದರೆ ಮಕ್ಕಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಕೇಳುವುದಾಗಿ ಸಂಜುಕ್ತ ಹೇಳಿದಳು. ಜಿ8 ಶೃಂಗಸಭೆಗೆ ಸಮಾನಾಂತರವಾಗಿ ಯುವ ಶೃಂಗಸಭೆಯಾದ ಜೂನಿಯರ್ 8ರಲ್ಲಿ ಭಾಗವಹಿಸಲು ಒರಿಸ್ಸಾದಿಂದ ಲಾ ಅಕ್ವಿಲಾಗೆ ಸಂಜುಕ್ತಾ ಕಾಲಿಟ್ಟಿದ್ದಾಳೆ.
ತಾನು ಶಾಲೆಗೆ ಹೋಗಲು ಹೋರಾಟ ಮಾಡಬೇಕಾಯಿತು. ತಾನು ಶಾಲೆಗೆ ಹೋಗಲು ತಂದೆಗೆ ಮನದಟ್ಟು ಮಾಡಲು ಸಾಧ್ಯವಾಗದಿದ್ದರೆ ಜೆ-8 ಸಭೆಯಲ್ಲಿ ಭಾಗವಹಿಸಲು ಸಾಧ್ಯವಿರುತ್ತಿರಲಿಲ್ಲವೆಂದು ಸಂಜುಕ್ತ ಹೇಳಿದಳು. ಜಾಗತಿಕ ನಾಯಕರನ್ನು ಭೇಟಿಯಾಗಲು 14-17ರ ವಯೋಮಿತಿಯ ಅಪ್ರಾಪ್ತ ವಯಸ್ಕ 14 ಮಂದಿಯಲ್ಲಿ ಸಂಜುಕ್ತಳೂ ಸೇರಿದ್ದಾಳೆ.
52 ಸದಸ್ಯರ ಜೆ8 ಸಭೆಯಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಬಡತನ ಹಿನ್ನೆಲೆಯಲ್ಲಿ ಶಿಕ್ಷಣ, ಹವಾಮಾನ ಬದಲಾವಣೆ, ಮಕ್ಕಳ ಹಕ್ಕುಗಳ ವಿಷಯಗಳನ್ನು ನಿಭಾಯಿಸಲು ಕ್ರಮ ಕೈಗೊಳ್ಳುವುದಕ್ಕೆ ಕರೆ ನೀಡುವ ಯೋಜನೆ ಮತ್ತು ಘೋಷಣೆಯನ್ನು ಬಿಡುಗಡೆ ಮಾಡಲಾಯಿತು. |