ಫ್ರೆಂಚ್ ಅಧ್ಯಕ್ಷ ನಿಕೋಲಾಸ್ ಸಾರ್ಕೋಜಿ ತಮ್ಮ ಹೊಸ 50 ಮಿಲಿಯನ್ ಪೌಂಡ್ ಮೌಲ್ಯದ ಜೆಟ್ ವಿಮಾನಕ್ಕೆ ತನ್ನ ಅರ್ಧಾಂಗಿ ಕಾರ್ಲಾ ಹೆಸರನ್ನು ಇಟ್ಟಿದ್ದಾರೆ. ಸಾರ್ಕೋಜಿಗೆ ಪತ್ನಿರಹಿತರಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆಂಬ ಭಾವನೆ ಬರದಂತೆ ವಿಮಾನಕ್ಕೆ ತಮ್ಮ ಪತ್ನಿ ಕಾರ್ಲಾ ಹೆಸರನ್ನಿಟ್ಟಿದ್ದಾರೆ. ಬೃಹತ್ ಐಷಾರಾಮಿ ಡಸಾಲ್ಟ್ ಫಾಲ್ಕನ್ 7X ಜೆಟ್ 6000 ನಾಟಿಕಲ್ ಮೈಲುಗಳ ವ್ಯಾಪ್ತಿ ಹೊಂದಿದ್ದು, ವಿಮಾನದ ಬದಿಯಲ್ಲಿ ಕೈಯಿಂದ ಚಿತ್ರಿಸಿದ 'ಕಾರ್ಲಾ ಇನ್' ಥಳ ಥಳ ಹೊಳೆಯುತ್ತಿದೆಯೆಂದು ಡೇಲಿ ಟೆಲಿಗ್ರಾಫ್ ವರದಿ ಮಾಡಿದೆ.ಇದೊಂದು ಸುಂದರ ವಿಮಾನವಾಗಿದ್ದು, ಅಧ್ಯಕ್ಷರ ಪತ್ನಿಯ ನಾಮಕರಣ ಮಾಡಲಾಗಿದೆಯೆಂದು ಪ್ಯಾರಿಸ್ ಬಳಿಯ ವಿಲ್ಲಾಕೌಬ್ಲೆ ವಾಯುನೆಲೆಯ ಮೂಲವೊಂದು ತಿಳಿಸಿದೆ. ಪೂರ್ಣ ಲೆದರ್ ಆಸನಗಳು ಮತ್ತು ಟೀಕ್ ಡೆಸ್ಕ್‌ಗಳಿರುವ ಫಾಲ್ಕನ್ ಕೆಂಪು, ಬಿಳಿ ಮತ್ತು ನೀಲಿ ಬಣ್ಣದಿಂದ ಕೂಡಿದೆ. ಸಾರ್ಕೊಜಿ ಉತ್ತಮ ಶ್ರೇಣಿಯ ಏರ್‌ಬಸ್ ಎ330-200 ವಿಮಾನವೊಂದನ್ನು ಕೂಡ ಖರೀದಿಸುತ್ತಿದ್ದು, ಯಾವುದೇ ಐರೋಪ್ಯ ನಾಯಕರ ವಿಮಾನಕ್ಕಿಂತ ದೊಡ್ಡದಾಗಿದ್ದು, ಬರಾಕ್ ಒಬಾಮಾ ಅವರ ಬೋಯಿಂಗ್ 747-200 ವಿಮಾನಕ್ಕಿಂತ ಸಣ್ಣದಾಗಿದೆ. ಈ ಏರ್‌ಬಸ್ ವಿಮಾನ ಮನೆಯಲ್ಲಿ ಏನೇನು ಸೌಕರ್ಯವಿದೆಯೇ ಅವೆಲ್ಲ ಸೌಕರ್ಯದಿಂದ ಸಜ್ಜುಗೊಂಡಿದೆ. ಸಾರ್ಕೊಜಿಗೆ ಮತ್ತು ಅವರ ಕಾರ್ಯದರ್ಶಿಗೆ ಮೇಜುಗಳು, 12 ಜನರಿಗೆ ಮೀಟಿಂಗ್ ರೂಂ, 60 ಪ್ರಯಾಣಿಕರಿಗೆ ಆಸನವ್ಯವಸ್ಥೆ ಮತ್ತು ಮಲಗುವ ಕೋಣೆ ಮತ್ತು ಖಾಸಗಿ ಸ್ನಾನದ ಕೋಣೆಯನ್ನು ಹೊಂದಿದೆ. |