ಖ್ಯಾತ ಪಾಪ್ ತಾರೆ ಮೈಕೇಲ್ ಜಾಕ್ಸನ್ ವಿಪರೀತ ಔಷಧಗಳ ಸೇವನೆಯಿದ್ದ ಮೃತಪಟ್ಟಿರುವುದಾಗಿ ವಿಷ ಸೇವನೆ ಪರೀಕ್ಷೆ ವರದಿ ತಿಳಿಸಿದೆಯೆಂದು ಸನ್ ನಿಯತಕಾಲಿಕ ವರದಿ ಮಾಡಿದೆ. ಮೈಕೆಲ್ ದೇಹದಲ್ಲಿ ಅಪಾಯಕಾರಿ ಮಟ್ಟದಲ್ಲಿ ಈ ಡ್ರಗ್ಸ್‌ಗಳು ಇದ್ದವೆಂದು ವರದಿ ಹೇಳಿದೆ. ಡೆಮರಾಲ್ ಮತ್ತು ಹೆರಾಯಿನ್ ಬದಲಿಯಾಗಿ ಮೆಥಾಡನ್ ಔಷಧಿಗಳ ಕಾಕ್‌ಟೇಲ್ ವಿಪರೀತ ಸೇವಿಸಿದ್ದೇ ಮೈಕೇಲ್ ಸಾವಿಗೆ ಕಾರಣವೆಂದು ಆರಂಭಿಕ ವಿಷಸೇವನೆ ಪರೀಕ್ಷೆ ವರದಿಯಲ್ಲಿ ತಿಳಿಸಿದೆ. ಆ ಔಷಧಿಗಳ ಮಿಶ್ರಣವು ಒಬ್ಬ ವ್ಯಕ್ತಿಯನ್ನು ಕೊಲ್ಲುವಷ್ಟು ಪ್ರಮಾಣದಲ್ಲಿತ್ತು ಎಂದು ಹೇಳಲಾಗಿದೆ. ಮೈಕೆಲ್ ಜಾಕ್ಸನ್ ನಿಗೂಢ ಸಾವಿನ ಬಗ್ಗೆ ಅನೇಕ ಊಹಾಪೋಹಗಳು ಹರಡಿದ್ದು, ಡ್ರಗ್ ಓವರ್‌ಡೋಸ್‌ನಿಂದ ಸತ್ತಿರಬಹುದೆಂದು ಈ ಮುಂಚೆ ಶಂಕಿಸಲಾಗಿತ್ತು. ಮೈಕೆಲ್ ಬಹಳಕಾಲದಿಂದ ಈ ಡ್ರಗ್ಸ್‌ಗಳನ್ನು ಬಳಸುತ್ತಿದ್ದುರಿಂದ ವಿಪರೀತ ಒತ್ತಡದಲ್ಲಿದ್ದರೆಂದು ಹೇಳಲಾಗಿದೆ. ಮೈಕೆಲ್ ಬದುಕಿದ್ದಾಗ ವಿವಾದಗಳ ಕೇಂದ್ರ ಬಿಂದುವಾಗಿದ್ದು, ಸತ್ತ ಮೇಲೂ ಅವರ ಸುತ್ತ ವಿವಾದಗಳ ಹುತ್ತ ಆವರಿಸಿತ್ತು. |