ವಿಶ್ವದ ಪ್ರಮುಖ ಶಕ್ತಿಯೆಂಬ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿದೆಯೆಂದು ಒಪ್ಪುವುದರೊಂದಿಗೆ ಜಿ-8 ಶೃಂಗಸಭೆಯು ಶುಕ್ರವಾರ ಮುಕ್ತಾಯ ಕಂಡಿತು. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಸಮಾನ ಹೆಜ್ಜೆಯೊಂದಿಗೆ ಜಿ14 ಸಮಗ್ರ ಸಂಘಟನೆಯಾಗಿ ಫೀನಿಕ್ಸ್‌ನಂತೆ ಬೂದಿಯಿಂದ ಮೇಲೇಳುತ್ತಿದೆ. ಶೃಂಗಸಭೆಯ ಆತಿಥ್ಯ ರಾಷ್ಟ್ರವಾದ ಸಿಲ್ವಿಯೊ ಬರ್ಲುಸ್ಕೋನಿ ಜಿ-8ರ ಸನ್ನಿಹಿತ ಸಾವಿನ ಬಗ್ಗೆ ಸೂಚನೆ ನೀಡಿದ್ದಾರೆ.
ಜಾಗತಿಕ ಆರ್ಥಿಕತೆಗೆ ಮಾರ್ಗದರ್ಶನ ತೋರುವಲ್ಲಿ ಜಿ-8 ಸೂಕ್ತ ಸ್ವರೂಪವಲ್ಲವೆಂದು ನಾವು ಕಂಡಿದ್ದೇವೆ. ಬದಲಿಗೆ, ಶೇ.80ರಷ್ಟು ವಿಶ್ವ ಆರ್ಥಿಕತೆಯನ್ನು ಪ್ರತಿನಿಧಿಸುವ ಜಿ-14 ನಿಜವಾದ ಚರ್ಚೆಯನ್ನು ಹುಟ್ಟು ಹಾಕುತ್ತದೆ. ವಿಶಿಷ್ಠ ಫಲಿತಾಂಶಗಳಿಗೆ ದಾರಿಮಾಡಿಕೊಡುವ ಚರ್ಚೆಗಳಿಗೆ ಜಿ14 ಉತ್ತಮ ಪರಿಹಾರವೆಂದು ಕಾಣಲು ಬಯಸುತ್ತೇವೆಂದು ಅವರು ಹೇಳಿದರು.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸ್ಥಿರವಾದ ಕುಸಿತದ ಜತೆ ಭಾರತ ಮತ್ತು ಚೀನಾ ಮುಂತಾದ ಅಭಿವೃದ್ಧಿಶೀಲ ರಾಷ್ಟ್ರಗಳ ಕ್ಷಿಪ್ರಗತಿಯ ಬೆಳವಣಿಗೆಯಿಂದ ಶ್ರೀಮಂತ ಜಿ-8 ಕ್ಲಬ್ ಅಪ್ರಸ್ತುತವೆನಿಸಿದೆಯೆಂದು ಜಿ-8 ರಾಷ್ಟ್ರಗಳ ನಡುವಿನ ವಾಸ್ತವ ಪರಿಸ್ಥಿತಿಯನ್ನು ಬರ್ಲುಸ್ಖೋನಿ ಪ್ರತಿಧ್ವನಿಸಿದ್ದಾರೆ. ಬ್ರೆಜಿಲ್‌ನ ಅಧ್ಯಕ್ಷ ಲುಲಾ ಹೊಸ ಗುಂಪಿನ ಪರಿಕಲ್ಪನೆ ಕುರಿತು ಹೇಳಿದಾಗ, ಜಾಗತಿಕ ಜಾಗತಿಕ ಆಡಳಿತ ವಿಷಯಗಳನ್ನು ನಿಭಾಯಿಸಲು ಜಿ14 ಸಂಘಟನೆಗೆ ಫ್ರಾನ್ಸ್ ಅಧ್ಯಕ್ಷ ಸಾರ್ಕೋಜಿ ಬಲವಾಗಿ ಪ್ರತಿಪಾದಿಸಿದರೆಂದು ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ತಿಳಿಸಿದ್ದಾರೆ.
ಜಿ8ರ ಸ್ಥಾನದಲ್ಲಿ ಭಾರತ, ಅಮೆರಿಕ, ಚೀನಾ, ರಷ್ಯಾ, ಜಪಾನ್, ಫ್ರಾನ್ಸ್, ಜರ್ಮನಿ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಮೆಕ್ಸಿಕೊ, ಕೆನಡಾ, ಬ್ರಿಟನ್ ,ಇಟಲಿ ಮತ್ತು ಇನ್ನೊಂದು ರಾಷ್ಟ್ರ ಈಜಿಪ್ಟ್ ಸೇರಿದಂತೆ ಜಿ-14 ಗುಂಪನ್ನು ರೂಪಿಸಬೇಕೆಂದು ಅನೇಕ ಮಂದಿಯ ಭಾವನೆಯಾಗಿತ್ತೆಂದು ಮೆನನ್ ಹೇಳಿದರು. |