15 ಮಂದಿ ಭಾರತೀಯ ಸಿಬ್ಬಂದಿಯಿದ್ದ ಸರಕುಸಾಗಣೆ ನೌಕೆಯನ್ನು ಸೊಮಾಲಿಯದಲ್ಲಿ ಬೊಸಾಸೊ ಬಂದರು ನಗರದಿಂದ ಅಪಹರಿಸಲಾಗಿದೆಯೆಂದು ಮಾಧ್ಯಮದ ವರದಿ ಶನಿವಾರ ತಿಳಿಸಿದೆ. ಸೊಮಾಲಿ ಬಂದರಿನಲ್ಲಿ ಯುಎಇಯ ಸರಕುಗಳನ್ನು ಇಳಿಸುತ್ತಿದ್ದಾಗ ನೌಕೆಯನ್ನು ಅಪಹರಿಸಲಾಗಿದೆ.
15 ಸಿಬ್ಬಂದಿಯಿದ್ದ ಭಾರತೀಯ ಸರಕುಸಾಗಣೆ ನೌಕೆಯನ್ನು ಶುಕ್ರವಾರ ಮಧ್ಯಾಹ್ನ ಬೊಸಾಸೊ ಬಂದರು ನಗರದಿಂದ 14 ನಾಟಿಕಲ್ ಮೈಲು ದೂರದಲ್ಲಿ ಸೊಮಾಲಿಯದ ಅರೆ ಸ್ವಾಯತ್ತ ಪ್ರದೇಶದಲ್ಲಿ ಕಡಲ್ಗಳ್ಳರು ವಶಕ್ಕೆ ತೆಗೆದುಕೊಂಡರು ಎಂದು ಆಸ್ಟ್ರೇಲಿಯ.ಟು ವೆಬ್‌ಸೈಟ್ ವರದಿಮಾಡಿದೆ.ಸೊಮಾಲಿ ಬಂದರಿನಲ್ಲಿ ಯುಎಇಯಿಂದ ತಂದ ಸರಕುಗಳನ್ನು ಇಳಿಸಿದ ಬಳಿಕ ನೌಕೆಯನ್ನು ಕಡಲ್ಗಳ್ಳರು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು.
ಸೌದಿ ಅರೇಬಿಯ ಮತ್ತು ಆಫ್ರಿಕದ ತೀರದ ನಡುವೆ ನೌಕೆಯು ನಿಯಮಿತವಾಗಿ ಸಂಚಾರ ನಡೆಸುತ್ತಿತ್ತು. ದಹಾಬ್‌ಶಿಲ್(ಹವಾಲ ಹಣ ವರ್ಗಾವಣೆ ನಿರ್ವಾಹಕ) ಕುದುರಿಸಿದ ಒಪ್ಪಂದದ ಅನ್ವಯ ಸಕ್ಕರೆಯನ್ನು ತರುತ್ತಿತ್ತೆಂದು ವರದಿ ಹೇಳಿದೆ. |