ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮೈಕೆಲ್ ಜಾಕ್ಸನ್ ಸಾವು ಕೊಲೆ: ಅಕ್ಕನ ಆರೋಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಕೆಲ್ ಜಾಕ್ಸನ್ ಸಾವು ಕೊಲೆ: ಅಕ್ಕನ ಆರೋಪ
ತನ್ನ ಸಹೋದರ, ಪಾಪ್ ದೊರೆ ಮೈಕೆಲ್ ಜಾಕ್ಸನ್‌ರನ್ನು ಸಂಪತ್ತಿಗಾಗಿ ಕೊಲೆ ಮಾಡಲಾಗಿದೆ ಎಂದು ಅವರ ಸಹೋದರಿ ಲಾ ತೋಯ ಆರೋಪಿಸಿದ್ದಾರೆ. "ಅವರು ಬದುಕಿರುವುದಕ್ಕಿಂತ ಸತ್ತಾಗ ಇನ್ನಷ್ಟು ಬೆಲೆಬಾಳುತ್ತಾರೆ"ಎಂದು ಅವರು ಹೇಳಿದ್ದಾರೆ.

ಜಾಕ್ಸನ್ ಅವರ ಕೊಲೆ ಸಾಧ್ಯತೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಲಾಸ್ ಏಂಜಲೀಸ್ ಪೊಲೀಸರು ಹೇಳಿರುವ ಎರಡು ದಿನಗಳ ಬಳಿಕ ತೋಯಾರ ಹೇಳಿಕೆ ಹೊರಬಿದ್ದಿದೆ.

ತನ್ನ ಸಹೋದರನ ಅತಿಯಾದ ಡ್ರಗ್ ಸೇವನೆ ಒಂದು ಸಂಚು ಎಂಬುದು ತನಗೆ ಮತ್ತು ತನ್ನ ಕುಟುಂಬಕ್ಕೆ ಮನವರಿಕೆಯಾಗಿದೆ ಎಂದಿರುವ ಅವರು, ಜಾಕ್ಸನ್‌ರ ಒಂದು ಶತಕೋಟಿ ಪೌಂಡ್ ಸಂಪತ್ತಿಗಾಗಿ ರಹಸ್ಯ ತಂಡಗಳು ಈ ಕೃತ್ಯವನ್ನು ಎಸಗಿವೆ ಎಂದು ಅವರು ದೂರಿರುವುದಾಗಿ ನ್ಯೂಸ್ ಆಫ್ ದಿ ವರ್ಲ್ಡ್ ವರದಿ ಮಾಡಿದೆ.

"ಮೈಕೆಲ್‌ನನ್ನು ಕೊಲೆ ಮಾಡಲಾಗಿದೆ. ಈ ಸಂಚಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಇರುವುದಲ್ಲ. ಇದು ಜನರ ಸಂಚಾಗಿದೆ, ಇದರ ಹಿಂದಿನ ಏಕೈಕ ಕಾರಣ ಹಣ ಎಂಬುದಾಗಿ ನನಗನಿಸುತ್ತದೆ. ಅವರ ಸಂಗೀತ ಪ್ರಕಟಣಾ ಆಸ್ತಿಗಳು ಶತಕೋಟಿ ಪೌಂಡ್‌ನಷ್ಟು ಬೆಲೆಬಾಳುತ್ತಿದ್ದು ಇದಕ್ಕಾಗಿ ಅವರ ಕೊಲೆ ಮಾಡಲಾಗಿದೆ" ಎಂದು ಅವರು ಹೇಳಿರುವುದಾಗಿ ಪತ್ರಿಕಾ ವರದಿ ತಿಳಿಸಿದೆ.

ಜಾಕ್ಸನ್ ಅವರ 53ರ ಹರೆಯದ ಸೋಹದರಿ, "ತನ್ನ ತಮ್ಮನನ್ನು ನಿಯಂತ್ರಣದಲ್ಲಿರಿಸಲು ಮತ್ತು ಹೇಳಿದಂತೆ ಕೇಳಿಸಲು ಸರಣಿ ಡ್ರಗ್ ನೀಡಲಾಗಿತ್ತು ಎಂದು ಹೇಳಿದ್ದಾರೆ. ಅವರ ಕತ್ತು ಮತ್ತೆ ತೋಳುಗಳಲ್ಲಿ ಸೂಜಿ ಚುಚ್ಚಿದ ಹಲವು ಗುರುತುಗಳಿದ್ದವು. ಇದು ಕೊಲೆಯಲ್ಲದೆ ಮತ್ತೇನಲ್ಲ. ನನ್ನ ಸಹೋದರನ ಕೊಲೆಗೆ ಕಾರಣ ಏನೆಂದು ಪತ್ತೆ ಹಚ್ಚುವ ತನಕ ತಾನು ಸುಮ್ಮನಿರಲಾರೆ" ಎಂದು ಹೇಳಿದ್ದಾರೆ.

ಅವರಿಗೆ ಲಂಡನ್‌ನಲ್ಲಿ 50 ಪ್ರದರ್ಶನಗಳನ್ನು ನೀಡುವ ಇಚ್ಛೆ ಇಲ್ಲದಿದ್ದರೂ ಬಲವಂತದಿಂದ ಕೆಲಸ ಮಾಡುವಂತೆ ಒತ್ತಡ ಹೇರಲಾಗಿತ್ತು. ಜಾಕ್ಸನ್‌ರನ್ನು ಅವರ ಕುಟುಂಬದಿಂದ ದೂರವಿರಿಸಲಾಗಿತ್ತು. ಅವರನ್ನು ನಿಯಂತ್ರಿಸಿದ್ದವರು ಕುಟುಂಬದ ಭೇಟಿಗೆ ಅವಕಾಶ ನೀಡುತ್ತಿರಲಿಲ್ಲ. ಅವರು ಕೇವಲ 10 ಪ್ರದರ್ಶನಗಳನ್ನು ನೀಡುವ ಇಚ್ಛೆ ಹೊಂದಿದ್ದರು. ಅವರ ಮೇಲೆ ಒತ್ತಡ ಹೇರಲಾಗಿತ್ತು. ಮೈಕೆಲ್ ತನ್ನ ಅಭಿಮಾನಿಗಳಿಗೆ ನಿರಾಸೆ ಗೊಳಿಸಲು ಬಯಸುತ್ತಿರಲಿಲ್ಲ" ಎಂದು ಅವರು ಹೇಳಿದ್ದಾರೆ.

"ಮೈಕೆಲ್ ಸಂಗೀತವನ್ನು ಬಿಟ್ಟು ಹಾರರ್ ಚಿತ್ರವನ್ನು ನಿರ್ದೇಶಿಸಲು ಬಯಸಿದ್ದರು. ತ್ರಿಲ್ಲರ್ ಎಂಬ ಹೆಸರಿನ ಸಿನಿಮಾ ಕುರಿತು ಅವರು ಎಲ್ಲ ತಯ್ಯಾರಿ ನಡೆಸಿದ್ದರು. ಇದಕ್ಕಾಗಿ ಇದೀಗಾಗಲೇ ಪೋಸ್ಟರ್ ಸಿದ್ಧಪಡಿಸಿದ್ದರು. ಇದನ್ನು ಮಾಡಿದ ಏಕೈಕ ವ್ಯಕ್ತಿ ಎಂಬುದನ್ನು ತೊಡೆದು ಹಾಕಲು ಸಂಚುಕೋರರು ಬಯಸಿದ್ದರು" ಎಂದು ಮಾಜಿ ಪ್ಲೇಬಾಯ್ ಮಾಡೆಲ್ ಆಗಿದ್ದ ತೋಯಾ ಹೇಳಿದ್ದಾರೆ.

"ಮೈಕೆಲ್ ಮನೆಯಲ್ಲಿ ಯಾವಾಗಲು ದುಡ್ಡು ಇರುತ್ತಿತ್ತು. ದುರಂತ ಸಂಭವಿಸಿದ ದಿನ ನಾನು ಆತನ ಮನೆಗೆ ತೆರಳಿದ ವೇಳೆ ಆತನ ಮನೆಯಲ್ಲಿ ದುಡ್ಡು ಅಥವಾ ಆಭರಣಗಳು ಇರಲಿಲ್ಲ. ನಾನು ಹೋಗುವಷ್ಟರಲ್ಲಿ ಅಲ್ಲಿಗೆ ಹಲವಾರು ಮಂದಿ ಬಂದುಹೋಗಿದ್ದರು" ಎಂದು ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಸಮಾ ಅಫ್ಘಾನಿಸ್ತಾನದಲ್ಲಿದ್ದಾನೆ: ರೆಹ್ಮಾನ್ ಮಲಿಕ್
ಟಿಮ್ ರೋಮರ್ ಭಾರತದ ನೂತನ ರಾಯಭಾರಿ
ಚೀನಾ: ಮಾರಣಾಂತಿಕ ಕಲಹಕ್ಕೆ ಬಲಿಯಾದವರ ಸಂಖ್ಯೆ 184
ತನಿಖೆ ವಿಳಂಬಕ್ಕೆ ಭಾರತ ಕಾರಣ: ಪಾಕ್ ವರಸೆ
ಭಾರತದ ಜತೆ ಕಳವಳ ನಿಭಾಯಿಸಿದರೆ ಪಾಕ್ 'ದಳ್ಳಾಳಿ'
15 ಸಿಬ್ಬಂದಿಯಿದ್ದ ಭಾರತೀಯ ನೌಕೆ ಅಪಹರಣ