ಒಸಮಾ ಬಿನ್ ಲಾಡೆನ್ ಮತ್ತು ಉನ್ನತ ಅಲ್ ಖಾಯಿದಾ ನಾಯಕತ್ವ ಪಾಕಿಸ್ತಾನದಲ್ಲಿಲ್ಲ ಮತ್ತು ಒಸಾಮಾ ವಿರುದ್ಧ ಅಮೆರಿಕದ ಕ್ಷಿಪಣಿ ದಾಳಿಗಳು ವ್ಯರ್ಥ ಪ್ರಯತ್ನವೆಂದು ಒಳಾಡಳಿತ ಸಚಿಹ ರೆಹ್ಮಾನ್ ಮಲಿಕ್ ಹೇಳಿದ್ದಾರೆ. ನಾವು ಇತ್ತೀಚೆಗೆ ಬುಡಕಟ್ಟು ಪ್ರದೇಶಕ್ಕೆ ಸಾವಿರಾರು ಪಡೆಗಳನ್ನು ಕಳಿಸಿದ್ದು, ಒಸಾಮಾ ಪಾಕಿಸ್ತಾನದಲ್ಲಿದ್ದಿದ್ದರೆ ನಮಗೆ ತಿಳಿಯುತ್ತಿತ್ತೆಂದು ಅವರು ಹೇಳಿದರು.
ಒಸಾಮಾ ಮತ್ತು ಇನ್ನೂ ನಾಲ್ಕು ಐಥವಾ ಐದು ಮಂದಿ ಅಗ್ರನಾಯಕರು ಇದ್ದಿದ್ದರೆ ನಮ್ಮ ಕೈಗೆ ಸಿಕ್ಕಿಬೀಳುತ್ತಿದ್ದರೆಂದು ಅವರು ನುಡಿದರು. ಪಾಕಿಸ್ತಾನದ ವಿರುದ್ಧ ಬಹುತೇಕ ಚಟುವಟಿಕೆಗಳು ಕುನಾರ್‌ನಿಂದ ನಿರ್ದೇಶಿತವಾಗುತ್ತಿರುವುದರಿಂದ ನಮ್ಮ ಮಾಹಿತಿ ಪ್ರಕಾರ ಒಸಾಮಾ ಆಫ್ಘಾನಿಸ್ತಾನದಲ್ಲಿದ್ದಾನೆಂದು ಅವರು ಹೇಳಿದರು. ಡ್ರೋನ್ ದಾಳಿಗಳು ಅಲ್ ಖಾಯಿದಾ ದಾಳಿ ಮಾಡುವ ಸಾಮರ್ಥ್ಯವನ್ನು ಕುಂದಿಸುತ್ತದೆಂದು ಸಿಐಎ ಅಧಿಕಾರಿಗಳು ಹೇಳಿದ್ದಾರೆ.
ಆದರೆ ಅಲ್ ಖಾಯಿದಾ ನಾಯಕತ್ವವು ಗಡಿಯಾಚೆ ಪೂರ್ವ ಆಫ್ಘಾನಿಸ್ತಾನದಲ್ಲಿ ಇರುವುದರಿಂದ ಅದು ವ್ಯರ್ಥ ಪ್ರಯತ್ನವೆಂದು ಅವರು ನುಡಿದರು. 'ಅವರು ಮಧ್ಯಮ ಮಟ್ಟದ ಜನರನ್ನು ಹಿಡಿಯುತ್ತಿದ್ದಾರೆಯೇ ಹೊರತು ದೊಡ್ಡ ಮೀನು ಅವರ ಕೈಗೆ ಸಿಕ್ಕಿಲ್ಲ. ಅವರು ನಾಗರಿಕನ್ನು ಕೊಲ್ಲುತ್ತಿದ್ದು, ಸ್ಥಳೀಯರು ಸರ್ಕಾರದ ವಿರುದ್ಧ ತಿರುಗಿಬೀಳುವಂತಾಗಿದೆ. ನಾವು ಜನರ ಮನಸ್ಸಗಳನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ಆದರೆ ಒಂದು ಡ್ರೋನ್ ದಾಳಿಯಿಂದ ಅವರು ದೂರ ಸರಿಯುತ್ತಾರೆಂದು' ಮಲಿಕ್ ಹೇಳಿದರು. |