ಚೀನ ನಗರದಲ್ಲಿ ಕೋಮು ಹಿಂಸಾಚಾರದಿಂದ ಸತ್ತವರ ಸಂಖ್ಯೆ ಭಾನುವಾರ 1680ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರಲ್ಲಿ 70 ಜನರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಅಂಚಿನಲ್ಲಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗುರ್ ಮುಸ್ಲಿಮರು ಮತ್ತು ಹಾನ್ ಚೈನೀಸ್ ನಡುವೆ ಜನಾಂಗೀಯ ಹಿಂಸಾಚಾರದಲ್ಲಿ ಗಾಯಗೊಂಡವರ ಸಂಖ್ಯೆ ಹಿಂದಿನ ಸಂಖ್ಯೆಯಾದ 1100ಕ್ಕಿಂತ 600ರಷ್ಟು ಹೆಚ್ಚಾಗಿದೆಯೆಂದು ರಾಷ್ಟ್ರಸ್ವಾಮ್ಯದ ಕ್ಸಿನುವಾ ಸುದ್ದಿಸಂಸ್ಥೆ ತಿಳಿಸಿದೆ.
ಗಾಯಗೊಂಡ 939 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಲ್ಲಿ 216 ಜನರು ಗಂಭೀರವಾಗಿ ಗಾಯಗೊಂಡಿದ್ದು, 74 ಜನರು ಸಾವಿನ ಅಂಚಿಗೆ ತಲುಪಿದ್ದಾರೆಂದು ಕ್ಸಿನುವಾ ಹೇಳಿದೆ. ಬಸ್, ವ್ಯಾನ್‌ಗಳು, ಪೊಲೀಸ್ ಕಾರುಗಳು ಸೇರಿದಂತೆ 627 ವಾಹನಗಳನ್ನು ನಜ್ಜುಗುಜ್ಜು ಮಾಡಿ ಬೆಂಕಿ ಹಚ್ಚಲಾಗಿದೆ. ಅವುಗಳಲ್ಲಿ 184 ವಾಹನಗಳು ಗಂಭೀರವಾಗಿ ಹಾನಿಯಾಗಿವೆ.
ಜನಾಂಗೀಯ ಉಗುರ್ ಸಮುದಾಯದ ಪ್ರತಿಭಟನೆ ಭಾನುವಾರ ಹಿಂಸಾಸ್ವರೂಪಕ್ಕೆ ತಿರುಗಿ ಹಾನ್ ಚೈನೀಸ್ ಜನರ ಜತೆ ಬೀದಿಕಾಳಗಕ್ಕೆ ಇಳಿದಿದ್ದರಿಂದ 184 ಜನರು ಹತರಾಗಿದ್ದರು. ಈ ಹಿಂಸಾಕಾಂಡದಲ್ಲಿ 137 ಹ್ಯಾನ್ಸ್ ಜನರು, 46 ಉಗುರ್ ಮತ್ತು ಹುಯಿ ಜನರು ಸತ್ತಿದ್ದು, ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. |